

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಂಗ್ರೆಸ್ ಮುಖಂಡ ಮಾರಿಹಾಳದ ಬಸವರಾಜ ಮ್ಯಾಗೋಟಿ ಸೇರಿದಂತೆ ಐವರನ್ನು ಬೆಳಗಾವಿ ಜಿಲ್ಲಾ ಕೆಡಿಪಿ ಸಮಿತಿಗೆ ನೇಮಕ ಮಾಡಿ ರಾಜ್ಯ ಸರಕಾರ ಅದೇಶ ಹೊರಡಿಸಿದೆ.
ಹುದಲಿಯ ಯಲ್ಲಪ್ಪ ತಲ್ಲೂರಿ, ಅಮ್ಮಿನಬಾವಿಯ ಬಸಪ್ಪ ಕೋಳಿ, ಕಿತ್ತೂರಿನ ಫಾತಿಮಾ ಮೋದಿನಸಾಬ್, ಸವದತ್ತಿಯ ದೀಪಿಕಾ ಮಠಪತಿ ಕೆಡಿಪಿ ಸಮಿತಿಗೆ ನೇಮಕವಾಗಿದ್ದಾರೆ.
ಕೆಡಿಪಿ ಸಮಿತಿಗೆ ನೇಮಕವಾದ ಹಿನ್ನೆಲೆಯಲ್ಲಿ ಮ್ಯಾಗೋಟಿ ಅವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮೊದಲಾದವರು ಸನ್ಮಾನಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜಾ ಪಾಟೀಲ, ಉಪಾದ್ಯಕ್ಷ ಆಸೀಫ್ ಮುಲ್ಲಾ, ಅಪ್ಪಾ ಬಾಗವಾನ್, ದಿಲಾವರ ಪೆಂಡಾರಿ, ರಾಮಚಂದ್ರ ಚವ್ಹಾಣ, ಲಕ್ಷ್ಮೀನಾರಾಯಣ ಕಲ್ಲೂರು, ರಮೇಶ ಅಕ್ಕತಂಗೇರಹಾಳ್, ಶಂಕರ ಸೊಗಲಿ, ಈರಣ್ಣ ಹಿರವಣ್ಣವರ, ಕುಮಾರ ಅಕ್ಕತಂಗೇರಹಾಳ್, ಸಂಜಯ ಚಾಟೆ ಇದ್ದರು.