ಅಬಕಾರಿ ಇಲಾಖೆಯಿಂದ 1.65 ಕೋಟಿ ರೂ.ಮೌಲ್ಯದ ವಸ್ತು ವಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲೋಕಸಭಾ ಚುನಾವಣೆ ಹಿನ್ನೇಲೆಯಲ್ಲಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಬೆಳಗಾವಿ ಉತ್ತರ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಬಕಾರಿ ಅಧಿಕಾರಿಗಳಿಂದ ೩೪ ದ್ವಿ-ಚಕ್ರ ವಾಹನ, ೪ ಕಾರ್ ಹಾಗೂ ೨ ಹೆವಿ ವಾಹನಗಳನ್ನು ಸೇರಿ ೧,೬೫,೬೮,೧೯೧ ಮೌಲ್ಯದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣಾ ಆಯೋಗವು ನೀತಿ ಸಂಹಿತೆ ಮಾ.೧೬ ರಿಂದ ಜಾರಿಯಾದಾಗಿನಿಂದ ಏ.೧೯ ವರೆಗೆ ಅಬಕಾರಿ ಉಪ ಆಯುಕ್ತರ ಕಚೇರಿಯು ಬೆಳಗಾವಿ ಉತ್ತರ ಜಿಲ್ಲೆ ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯು ಲೋಕಸಭಾ ಚುನಾವಣೆ-೨೦೨೪ ನಿಮಿತ್ಯ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಅಬಕಾರಿ ಅಧಿಕಾರಿಗಳು ದಾಳಿ, ಗಸ್ತು ಹಾಗೂ ರಸ್ತೆಗಾವಲುಗಳನ್ನು ಕೈಗೊಂಡು ೫೭-ಘೋರ, ೪೯-ಸಾಮಾನ್ಯ ಹಾಗೂ ೩೬೨-೧೫(ಎ) ಹೀಗೆ ಒಟ್ಟು ೪೬೮ ಮೊಕದ್ದಮೆಗಳನ್ನು ದಾಖಲಿಸಿ ೫೭೦ ಆರೋಪಿಗಳನ್ನು ಬಂಧಿಸಲಾಗಿದೆ.
೧೮೫೧೬.೦೦೦ ಲೀಟರ್ ಭಾರತೀಯ ಮದ್ಯ, ೭೩.೦೦೦ ಲೀಟರ್ ಹೊರ ರಾಜ್ಯದ ಮದ್ಯ, ೧೫೩ ಲೀಟರ್ ಸೇಂದಿ, ೩೩೦ ಲೀಟರ್ ಕಳ್ಳಭಟ್ಟಿ ಸಾರಾಯಿ, ೮೩.೪ ಲೀಟರ್ ಬಿಯರ್ ಹಾಗೂ ೩೪ ದ್ವಿ-ಚಕ್ರ ವಾಹನ, ೪ ಕಾರ್ ಹಾಗೂ ೨ ಹೆವಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅಬಕಾರಿ ಪದಾರ್ಥಗಳ ಮತ್ತು ವಾಹನಗಳ ಮೌಲ್ಯವು ೧,೬೫,೬೮,೧೯೧ ಆಗಿರುತ್ತದೆ ಎಂದು ಬೆಳಗಾವಿ ಉತ್ತರ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಆಫೀಸ್‌ರಾದ ಪ್ರಶಾಂತಕುಮಾರ. ಕೆ ಅವರು ಪ್ರಕರಣದಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ