
ಪ್ರಗತಿವಾಹಿನಿ ಸುದ್ದಿ; ಭಾಲ್ಕಿ: ಹಣ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬೀದರ್ ಜಿಲ್ಲೆ ಭಾಲ್ಕಿ ಸಿಪಿಐ ಪಿ.ಆರ್.ರಾಘವೇಂದ್ರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಖಾಕಿ ಸಮವಸ್ತ್ರದಲ್ಲಿಯೇ ವ್ಯಕ್ತಿಯೋರ್ವರಿಂದ ಸಿಪಿಐ ಹಣ ಪಡೆದಿದ್ದರು. ವ್ಯಕ್ತಿಯಿಂದ ಹಣ ಪಡೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದ ಬೀದರ್ ಎಸ್ ಪಿ, ಡಿ.ಎಲ್.ನಾಗೇಶ್, ತನಿಖೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ಎಸ್ ಪಿ ಗೋಪಾಲ್ ಗೆ ಸೂಚಿಸಿದ್ದರು.
ತನಿಖೆಯಲ್ಲಿ ಸಿಪಿಐ ವಿರುದ್ಧದ ಆರೋಪ ಸಾಬೀತಾಗಿದ್ದು, ಪೊಲೀಸ್ ವರಿಷ್ಥಾಧಿಕಾರಿ ನೀಡಿರುವ ವರದಿ ಆಧರಿಸಿ ಕಲಬುರ್ಗಿ ಐಜಿಪಿ, ಸಿಪಿಐ ರಾಘವೇಂದ್ರ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ನಿವೃತ್ತ ತಹಶೀಲ್ದಾರ್ ನಿಧನ