Latest

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ನಟಿ

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ತಮಿಳಿನ ಖ್ಯಾತ ನಟಿ ದೀಪಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ನಟಿ ದೀಪಾ 29ನೇ ವಯಸಿನಲ್ಲಿಯೇ ಏಕಾಏಕಿ ಸಾವಿಗೆ ಶರಣಾಗಿರುವುದು ಆಘಾತಕ್ಕೆ ಕಾರಣವಾಗಿದೆ.

ಚೆನ್ನೈ ಹೊರವಲಯದ ಅಪಾರ್ಟ್ ಮೆಂಟ್ ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಒಂಟಿಯಾಗಿ ವಾಸವಾಗಿದ್ದ ದೀಪಾ ಡೆತ್ ನೋಟ್ ಬರೆದಿಟ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Related Articles

ಕುಟುಂಬದವರು ಹಲವುಬಾರಿ ಫೋನ್ ಮಾಡಿದರೂ ಫೋನ್ ತೆಗೆಯದಿದ್ದಾಗ ಗಾಬರಿಯಾದ ಪೋಷಕರು, ಅಪಾರ್ಟ್ ಮೆಂಟ್ ಗೆ ಧಾವಿಸಿದ್ದಾರೆ. ಆಗ ದೀಪಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತುಪ್ಪರಿವಾಲನ್ ಸಿನಿಮಾದಲ್ಲಿ ದೀಪಾ ಅಭಿನಯಿಸಿದ್ದರು. ಹಲವು ಚಿತ್ರಗಳಿಗಾಗಿಗೂ ಸಹಿ ಮಾಡಿದ್ದರು. ಆದರೆ ಉದಯೋನ್ಮುಖ ನಟಿ ಇದೀಗ ಆತ್ಮಹತ್ಯೆಗೆ ಶರಣಾಗಿರುವುದು ಚಿತ್ರರಂಗಕ್ಕೆ ಆಘಾತ ತಂದಿದೆ.

Home add -Advt

ನಮಿಬಿಯಾದಿಂದ ಭಾರತಕ್ಕೆ ಬಂದ ಚೀತಾಗಳ ಹೆಸರೇನು ಗೊತ್ತಾ?

https://pragati.taskdun.com/latest/naming-cheetahs-brought-namibia-kuno-national-park-madhyapradesh/

Related Articles

Back to top button