
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ವಿವಿಧ ವೃಂದ ಸಂಘಗಳ ಅನಿರ್ದಿಷ್ಟಾವಧಿ ಮುಷ್ಕರ ನಾಳೆಯಿಂದ ಆರಂಭಗೊಳ್ಳಲಿದೆ.
ಮುಷ್ಕರಕ್ಕೆ ಗ್ರಾಮ ಪಂಚಾಯಿತಿ ನೌಕರರು, ನಗರ, ಸ್ಥಳೀಯ ಆಡಳಿತ ಸಂಸ್ಥೆಗಳು, ಪಾಲಿಕೆಗಳ ನೌಕರರು, ಕಾಯಂ ಪೌರಕಾರ್ಮಿಕರು, ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯಿಂದ ಜಿಲ್ಲಾಧಿಕಾರಿವರೆಗಿನ ಅಧಿಕಾರಿ, ಸಿಬ್ಬಂದಿ ಬೆಂಬಲ ನೀಡಿದ್ದು ನೀರು ಸರಬರಾಜು, ಕಸ ಸಂಗ್ರಹಣೆ, ಶಾಲಾ ಕಾಲೇಜುಗಳು, ನೋಂದಣಿ ಪ್ರಕ್ರಿಯೆ ಎಲ್ಲವೂ ಸ್ಥಗಿತಗೊಳ್ಳಲಿವೆ.
ಆದರೆ ತುರ್ತು ಚಿಕಿತ್ಸೆ, ಸಾರಿಗೆ ಸೇವೆಗಳು ಲಭ್ಯವಾಗಲಿವೆ.
ಈ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದ್ದು ವಿವರ ಇಂತಿದೆ.
ಮಾರ್ಗಸೂಚಿ ವಿವರ ಇಂತಿದೆ:
*ರಾಜ್ಯ ಎಲ್ಲ ಎಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು ತಮ್ಮ ಅಧೀನದಲ್ಲಿ ಬರುವ ಉಪ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವೈಯಕ್ತಿಕವಾಗಿ ಆಹ್ವಾನ ನೀಡುವ ಮೂಲಕ ಸಭೆಗಳನ್ನು ಏರ್ಪಡಿಸಿ ಮುಕ್ತವಾಗಿ ಚರ್ಚಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಯಶಸ್ವಿಗೊಳಿಸುವುದು.
* 1-3-20223ರಿಂದ ಎಲ್ಲ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗುವುದು.
*ಕೇಂದ್ರ ಸಂಘ ನಿರ್ದಿಷ್ಟಪಡಿಸುವ ಮಾಹಿತಿಗಳನ್ನೊಳಗೊಂಡ ಪೋಸ್ಟರ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚುರಪಡಿಸುವುದು.
*ಸಂಘಟನೆಗಳು ಅಧಿಕೃತ ಸೂಚನೆ ನೀಡುವವರೆಗೆ ಮುಷ್ಕರವನ್ನು ಮುಂದುವರಿಸುವುದು.
* ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಉಪವಾಸ, ಧರಣಿ ಸತ್ಯಾಗ್ರಹ, ಘೋಷಣೆಗಳನ್ನು ಕೂಗುವುದನ್ನು ನಿರ್ಬಂಧಿಸಲಾಗಿದೆ. ಶಾಂತಿಯುತವಾಗಿ ಗೈರುಹಾಜರಾಗುವ ಮೂಲಕ ಹೋರಾಟ ಮಾಡುವುದು.
**ತಾಲೂಕು, ಜಿಲ್ಲಾ ಮಟ್ಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಇಲಾಖಾವಾರು ತಂಡಗಳನ್ನು ರಚಿಸಿಕೊಂಡು ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಜಿಲ್ಲೆ, ತಾಲೂಕು ವ್ಯಾಪ್ತಿಯ ಸರಕಾರಿ ಕಚೇರಿ ಶಾಲಾ ಕಾಲೇಜು, ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗೆ ಮನವೊಲಿಸಿ ಸರಕಾರಿ ಕೆಲಸಕ್ಕೆ ಹಾಜರಾಗದಂತೆ ಮನವೊಲಿಸುವುದು.
*ರಾಜ್ಯ ಸಂಘ ನಿರ್ದಿಷ್ಟಪಡಿಸಿರುವ ಮಾದರಿಯಲ್ಲಿ ಕರಪತ್ರ, ಇಮೇಜ್, ಪೋಸ್ಟರ್ ಮತ್ತು ಫ್ಲೆಕ್ಸ್ ಇತ್ಯಾದಿ ಮಾಡಿಸಿ ಪ್ರಚಾರ ಕೈಗೊಳ್ಳುವುದು.
*ಗೈರುಹಾಜರಿ, ಮುಷ್ಕರ ನಡೆಯುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಸರಕಾರ ಹಾಗೂ ಯಾವುದೇ ಜನಪ್ರತಿನಿಧಿಗಳನ್ನು ಟೀಕಿಸಬಾರದು.
*ಭಿನ್ನ ಹೇಳಿಕೆಯಿಂದ ಗೊಂದಲ ಉಂಟಾಗುವ ಸಾಧ್ಯತೆ ಇರುವುದರಿಂದ ಮುಷ್ಕರಕ್ಕೆ ಸಂಬಂಧಿಸಿದಂತೆ ಮುದ್ರಣ/ಎಲೆಕ್ಟ್ರಾನಿಕ್ ಮಾಧ್ಯಮಗಳ ಮುಂದೆ ಯಾವುದೇ ಹೇಳಿಕೆ/ಪ್ರಕಟಣೆಗಳನ್ನು ನೀಡುವಂತಿಲ್ಲ.
*ಮುಷ್ಕರದ ಸಂದರ್ಭದಲ್ಲಿ ಸರಕಾರ ಮುಷ್ಕರವನ್ನು ಹತ್ತಿಕ್ಕಲು ಕಾನೂನು ಕ್ರಮಗಳ ಮೂಲಕ ಬೆದರಿಕೆ ಹಾಕಿದ್ದಲ್ಲಿ ಸರಕಾರಿ ನೌಕರರು ಎದೆಗುಂದದೇ ಮುಷ್ಕರವನ್ನು ಯಶಸ್ವಿಗೊಳಿಸುವುದು.
*ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತುರ್ತು ಸೇವೆಗಳ ಸಿಬ್ಬಂದಿ (ಕ್ಯಾಶುವಾಲಿಟಿ, ಐಸಿಯು, ಎಂಸಿಯು ಮಾತ್ರ) ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವುದು.
*ಇನ್ನುಳಿದ ಎಲ್ಲ ಇಲಾಖೆಗಳ ಅಧಿಕಾರಿಗಳು/ ಸಿಬ್ಬಂದಿ ಮುಷ್ಕರದಲ್ಲಿ ಕಡ್ಡಾಯವಾಗಿ ಭಾಗವಹಿಸುವುದು.
ರಮೇಶ ಜಾರಕಿಹೊಳಿ ಟಾರ್ಗೆಟ್ ಮಾಡಿದ್ದು ಬೆಳಗಾವಿಯ 6+1 ಕ್ಷೇತ್ರ!
https://pragati.taskdun.com/ramesh-jarakiholi-targeted-the-61-constituency-of-belgaum/
32 ಕೋಟಿ ರೂ.ವೆಚ್ಚದಲ್ಲಿ ಚಿಕ್ಕೋಡಿ ನ್ಯಾಯಾಲಯ ಕಟ್ಟಡ: ಸಂಸದ ಅಣ್ಣಾಸಾಹೇಬ ಜೊಲ್ಲೆ ಶಂಕುಸ್ಥಾಪನೆ
https://pragati.taskdun.com/chikkodi-court-building-at-a-cost-of-rs-32-crore-mp-annasaheb-jolle-lays-the-foundation-stone/
*ಜಲಜೀವನ ಮಿಷನ್ ಯೋಜನೆಯಡಿ 40 ಲಕ್ಷ ಮನೆಗಳಿಗೆ ನೀರು: ಸಿಎಂ ಬೊಮ್ಮಾಯಿ*
https://pragati.taskdun.com/belagavijalajeevana-mition40-lakh-homewatercm-basavaraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ