Latest

*ಕುಡಿಯಲು ಹಣ ಕೊಡಲಿಲ್ಲ ಎಂದು ತಾತನನ್ನೇ ಕೊಂದ ಮೊಮ್ಮಗ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮೊಮ್ಮಗನ ಕುಡಿತದ ಚಟಕ್ಕೆ ತಾತ ಬಲಿಯಾದ ಘಟನೆ ನಡೆದಿದೆ. ಕುಡಿಯಲು ಹಣ ಕೊಡಲಿಲ್ಲ ಎಂದು ಅಜ್ಜನನ್ನೇ ಮೊಮ್ಮಗ ಹೊಡೆದುಕೊಂದ ಘಟನೆ ಬೆಂಗಳೂರಿನ ಕಮ್ಮನಹಳ್ಳಿ ಸ್ಲಮ್ ನಲ್ಲಿ ನಡೆದಿದೆ.

ಜೋಸೆಫ್ (54) ಕೊಲೆಯಾದ ದುರ್ದೈವಿ. ತಾತ ಜೋಸೆಫ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮೊಮ್ಮಗ ಆಂಟನಿ ಕೊಲೆ ಮಾಡಿದ್ದಾನೆ. ಮೊಮ್ಮಗ ಆಂಟನಿಯನ್ನು ಚಿಕ್ಕಂದಿನಿಂದಲೂ ತಾತ ಜೋಸೆಫ್ ಸಾಕಿದ್ದ. ಕುಡಿಯಲು ಹಣ ನೀಡುವಂತೆ ಪದೆ ಪದೇ ಜಗಳವಾಡುತ್ತಿದ್ದ.

ನಿನ್ನೆ ರಾತ್ರಿಯೂ ಇದೇ ವಿಚಾರವಾಗಿ ತಾತ-ಮೊಮ್ಮಗನ ನಡುವೆ ಜಗಳ ನಡೆದಿದೆ. ತಾತನ ತಲೆಗೆ ಆಂಟನಿ ದೊಣ್ಣೆಯಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತಾತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲು ಕೊರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.

ಜೋಸೆಫ್ ಹತ್ಯೆ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಾರಿಯಾಗುತ್ತಿದ್ದ ಮೊಮ್ಮಗ ಆಂಟನಿಯನ್ನು ಪೊಲೀಸರು ಬಂಧಿಸಿದ್ದಾರೆ.
*ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು; ಸಂಸದ ತೇಜಸ್ವಿ ಸೂರ್ಯ ಕಾಲೆಳೆದ ಕಾಂಗ್ರೆಸ್; ಪ್ರಿಯತಮೆಯ ಧ್ಯಾನದಂತೆ ಬಿಜೆಪಿಗರ ಕನಸು, ಮನಸಲ್ಲೂ 40%ನದ್ದೇ ಧ್ಯಾನ; ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ*

Home add -Advt

https://pragati.taskdun.com/valentines-daybjpcongresstweet-war/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button