Kannada NewsKarnataka NewsLatest

*ಗ್ರ್ಯಾನೈಟ್ ಮಾಫಿಯಾಗೆ ರೈತ ಬಲಿ; ಜಮೀನಿನಲ್ಲಿ ರೈತನ ಮೇಲೆಯೇ ಲಾರಿ ಹರಿಸಿ ಹತ್ಯೆ*

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಡೆದಿರುವ ಗ್ರ್ಯಾನೈಟ್ ಮಾಫಿಯಾಗೆ ರೈತರೊಬ್ಬರು ಬಲಿಯಾಗಿರುವ ಆರೋಪ ಕೇಳಿಬಂದಿದೆ. ಗ್ರ್ಯಾನೈಟ್ ಮಾಫಿಯಾ ತಡೆಯಲು ಮುಂದಾಗಿದ್ದಕ್ಕೆ ರೈತನ ಮೇಲೆಯೇ ಲಾರಿ ಹರಿಸಿ ಕೊಲೆಗೈಯ್ಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಚಿಕ್ಕಬಳ್ಳಾಪುರದ ಗುಮ್ಮಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿ ಗ್ರ್ಯಾನೈಟ್ ಮಾಫಿಯಾ ಹೆಚ್ಚುತ್ತಿದ್ದು, ರೈತ ರಾಘವೇಂದ್ರ (35) ಅವರನ್ನು ಜಮೀನಲ್ಲಿಯೇ ಲಾರಿ ಹರಿಸಿ ಹತ್ಯೆ ಮಾಡಲಾಗಿದೆ.

Home add -Advt

ಅಡ್ಡಗಲ್ಲ ಗ್ರಾಮದ ನಿವಾಸಿಯಾಗಿದ್ದ ರಾಘವೇಂದ್ರ ಜಮೀನಿನಲ್ಲಿ ಗ್ರ್ಯಾನೈಟ್ ಲಾರಿ ಓಡಿಸದಂತೆ ತಡೆದಿದ್ದ. ಗುಮ್ಮಲಾಪುರ ಗ್ರ್ಯಾನೈಟ್ ಕ್ವಾರಿ ಬಳಿ ಲಾರಿಗಳ ಸಂಚಾರ ಹೆಚ್ಚಿದ್ದರಿಂದ ಲಾರಿಗಳ ಓಡಾಡಕ್ಕೆ ರೈತ ತಡೆದಿದ್ದ. ಜೂನ್ 18ರ ಸಂಜೆ ರೈತ ರಾಘವೇಂದ್ರ ಮೇಲೆ ಲಾರಿ ಹರಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾರೆ.

ಗ್ರ್ಯಾನೈಟ್ ಮಾಫಿಯಾದಿಂದಲೇ ರೈತ ಬಲಿಯಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಕುಟುಂಬದವರು ಆಗ್ರಹಿಸಿದ್ದಾರೆ.

Related Articles

Back to top button