Latest

ಬಿಜೆಪಿ ಅಧಿಕಾರಕ್ಕೆ ಬಂದ್ರೂ ನೀವು ಮತ್ತೆ ಸಿಎಂ ಆಗಲ್ಲ; ಬಿಎಸ್ ವೈಗೆ ತಿರುಗೇಟು ನೀಡಿದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವಾಗ ಯಡಿಯೂರಪ್ಪ ಕಣ್ಣೀರು ಹಾಕಿದರು. ಕಣ್ಣೀರು ಸುಮ್ ಸುಮ್ನೆ ಬರುತ್ತಾ? ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ, ಯಡಿಯೂರಪ್ಪ ಕಾಲೆಳೆದಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಎಲೆಕ್ಷನ್ ನಲ್ಲಿ 135 ಸೀಟು ಗೆಲುತ್ತೇವೆ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಗೆದ್ದಿದ್ದು 104 ಸೀಟು ಮಾತ್ರ, ಇತ್ತೀಚೆಗೆ ಯಡಿಯೂರಪ್ಪ ಜನರ ಬಳಿ ಹೋಗಿಲ್ಲ. ಜನ ಬಿಜೆಪಿಯನ್ನು ಹೊರ ಹಾಕಲು ತೀರ್ಮಾನಿಸಿದ್ದಾರೆ. ಹೀಗಿರುವಾಗ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ಭ್ರಮೆಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.

Home add -Advt

ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗಲೇ ಜನ ತೀರ್ಮಾನಿಸಿದ್ರು. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು. ಒಂದು ವೇಳೆ ಬಿಜೆಪಿ ಬಂದ್ರೂ ಯಡಿಯೂರಪ್ಪನವರೇ ನೀವು ಸಿಎಂ ಆಗಲ್ಲ ಎಂದು ಟೀಕಿಸಿದ್ದಾರೆ.

ಸಿಎಂ ಸ್ಥಾನದಿಂದ ಯಡಿಯೂರಪ್ಪನವರನ್ನು ಮುಕ್ತ ಮಾಡಿದ್ದಾರೆ. ಆ ನೋವಲ್ಲಿ ಯಡಿಯೂರಪ್ಪ ನಮಗೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಬಿಜೆಪಿಯಿಂದ ಜನರಿಗೆ ನೋವುಂಟಾಗಿದೆ. ಇಷ್ಟಕ್ಕೂ ಉತ್ತರಪ್ರದೇಶವೇ ಬೇರೆ. ಕರ್ನಾಟಕವೇ ಬೇರೆ. ಇತ್ತೀಚಿಗೆ ನಡೆದ ಎಲೆಕ್ಷನ್ ಫಲಿತಾಂಶಗಳು ಏನಾಗಿವೆ ಎಂಬುದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಂಚ ರಾಜ್ಯ ಚುನಾವಣೆ ಫಲಿತಾಂಶ: ಸದನದಲ್ಲಿ ಅಬ್ಬರಿಸಿದ ಯಡಿಯೂಪ್ಪ

Related Articles

Back to top button