Belagavi NewsBelgaum NewsKannada NewsKarnataka NewsLatest

*ಬೆಳಗಾವಿ ಭಾಗದ ಜನರಿಗೆ ಬಂಪರ್ ಸುದ್ದಿ: ಹೊಸದಾಗಿ 700 ಬಸ್ ಆರಂಭ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ರಾಜ್ಯ ಸರ್ಕಾರ ಕಳೆದ ಕೆಲ ಸಮಯದಿಂದ ಬಸ್ ಸೌಲಭ್ಯದ ವಿಚಾರವಾಗಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರಿಗೆ ಬಂಪರ್ ನ್ಯೂಸ್ ಕೊಟ್ಟಿದ್ದು ಹೊಸದಾಗಿ 700 ಬಸ್ ಆರಂಭ ಮಾಡಲು ನಿರ್ಧಾರ ಮಾಡಿದೆ.

ಯಾವ್ಯಾವ ಜಿಲ್ಲೆಗಳಿಗೆ ಈ ಬಸ್ ಸಂಚಾರ ಇರಲಿದೆ?

ಮುಖ್ಯವಾಗಿ ಈ ಬಸ್‌ಗಳು, ಬೆಳಗಾವಿ, ಹಾವೇರಿ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳಿಗೆ ಈ ಬಸ್‌ಗಳನ್ನ ಬಿಡಲಾಗುತ್ತದೆ. ಈ ವಾಯುವ್ಯ ಸಾರಿಗೆ ವ್ಯಾಪ್ತಿಯ ಬಾಗಲಕೋಟೆ, ಬೆಳಗಾವಿ, ಶಿರಸಿ ಹುಬ್ಬಳ್ಳಿ, ಚಿಕ್ಕೋಡಿ,, ಹಾವೇರಿ, ಧಾರವಾಡ, ಗದಗ, ಹುಬ್ಬಳ್ಳಿ -ಧಾರವಾಡ ನಗರ ಸಾರಿಗೆ ಸಂಸ್ಥೆಗಳಿಗೆ ಈ ಹೊಸ ಬಸ್‌ಗಳನ್ನ ನೀಡಲಾಗುತ್ತದೆ. ಈ ಸಾರಿಗೆ ವಿಭಾಗದ ಅಡಿಯಲ್ಲಿ ಒಟ್ಟು 9 ವಿಭಾಗೀಯ ಕಚೇರಿಗಳಿದೆ. ಅದರಲ್ಲಿ 55 ಘಟಕಗಳಿದೆ. ಈ ಎಲ್ಲಾ ಘಟಕಗಳ ಅಡಿಯಲ್ಲಿ ಬಸ್‌ಗಳು ಸಂಚಾರ ಮಾಡಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

6 ಜಿಲ್ಲೆಗಳಿಗೆ ಹೊಸ ಬಸ್

Home add -Advt

ಬೆಳಗಾವಿ ನಗರ ಸಾರಿಗೆ ಬಸ್ ನಿಲ್ದಾಣದ ಉದ್ಘಾಟನೆ ಮಾಡಿದ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು ಈ ಸಮಯದಲ್ಲಿ ವಾಯವ್ಯ ಸಾರಿಗೆ ಸಂಸ್ಥೆಗೆ 700 ಹೊಸ ಬಸ್ಸುಗಳನ್ನ ಮತ್ತು ಬೆಳಗಾವಿ ನಗರಕ್ಕೆ 100 ಎಲೆಕ್ಟ್ರಿಕ್ ಬಸ್ಸುಗಳ ಸೇರಿಸುವ ಬಗ್ಗೆ ಘೋಷಣೆ ಮಾಡಿದ್ದಾರೆ. ಇನ್ನು ಈ ಹೊಸ ಬಸ್‌ಗಳು 6 ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಸಂಚಾರ ಮಾಡಲಿದೆ ಎನ್ನಲಾಗಿದೆ.

Related Articles

Back to top button