Kannada NewsLatest

ಮತ್ತೊಂದು ಅಂಗ ರವಾನೆ; ಧಾರವಾಡದಿಂದ ಬೆಳಗಾವಿವರೆಗೆ ಝೀರೋ ಟ್ರಾಫಿಕ್ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಧಾರವಾಡದಿಂದ ಬೆಳಗಾವಿಗೆ ಮತ್ತೊಂದು ಮಹಿಳೆಯ ಅಂಗಾಂಗ ರವಾನೆ ಮಾಡಲಾಗುತ್ತಿದ್ದು, ಸಾಹಿತ್ಯನಗರಿಯಿಂದ ಕುಂದಾನಗರಿವರೆಗೆ ಆಂಬುಲೆನ್ಸ್ ಗಾಗಿ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಲಾಗಿದೆ.

ಧಾರವಾಡದ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ 48 ವರ್ಷದ ಮಹಿಳೆಯ ಕಿಡ್ನಿಯನ್ನು ಬೆಳಗಾವಿಯ ಕೆ ಎಲ್ ಇ ಆಸ್ಪತ್ರೆಯಲ್ಲಿ ದಾಖಲಾಗಿರುವ ವ್ಯಕ್ತಿಯೋರ್ವರಿಗೆ ಕಸಿ ಮಾಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಳಿಗ್ಗೆ 10:30ಕ್ಕೆ ಧಾರವಾಡದ ಎಸ್ ಡಿಎಂ ನಿಂದ ಆಂಬುಲೆನ್ಸ್ ನಲ್ಲಿ ಮಹಿಳೆಯ ಕಿಡ್ನಿಯನ್ನು ಬೆಳಗಾವಿಗೆ ರವಾನಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಧಾರವಾಡದಿಂದ ಬೆಳಗಾವಿ ಕೆ ಎಲ್ ಇ ಆಸ್ಪತ್ರೆವರೆಗೆ ಝಿರೋ ಟ್ರಾಫಿಕ್ ನಿರ್ಮಿಸಲಾಗಿದ್ದು, ಪೊಲೀಸ್ ಭದ್ರತೆಯಲ್ಲಿ ಕಿಡ್ನಿ ರವಾನೆಯಾಗಲಿದೆ.

ಕಪಿಲಾ ನದಿಯಲ್ಲಿ ಈಜಲು ಜಿಗಿದ ಹುಡುಗರು; ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಯುವಕ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button