Karnataka NewsLatestPolitics

*ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಮುಖ್ಯ ಮಾಹಿತಿ: ಯೋಜನೆ ಅರ್ಜಿಯಲ್ಲಿ ಹೊಸ ನಿಯಮ*

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮುಖ್ಯಮಾಹಿತಿ. ಅರ್ಜಿಯಲ್ಲಿ ಹೊಸ ನಿಯಮ ಸೇರ್ಪಡೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆ ಮರು ಪರಿಶೀಲನೆ ನಿಟ್ಟಿನಲ್ಲಿ ಈ ಮಾರ್ಪಾಡು ಮಾಡಲಾಗಿದೆ.

ಗೃಹಲಕ್ಷ್ಮೀ ಮರುಪರಿಶೀಲನಾ ಸರ್ವೆ ಚುನಾವಣೆ ಮಾದರಿ ನೀತಿ ಸಂಹಿತೆ ಮುಗಿದ ಬಳಿಕ ಆರಂಭ ಆಗುವ ಸಾಧ್ಯತೆ ಇದೆ. ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನಾ ಅರ್ಜಿಯಲ್ಲಿ ಹಲವು ಹೊಸ ಪ್ರಶ್ನೆಗಳ ಸೇರ್ಪಡೆ ಮಾಡಲಾಗಿದೆ.

ಎಸ್ ಐಆರ್ ಮಾದರಿಯಲ್ಲೇ ಗೃಹಲಕ್ಷ್ಮಿ ಮರು ಪರಿಶೀಲನಾ ಅರ್ಜಿ ಇದ್ದು, ಆ್ಯಪ್‌ನಲ್ಲಿ ಸರ್ವೆ ಆದರೂ ಕೂಡ ಆಫ್‌ಲೈನ್ ಮರುಪರಿಶೀಲನಾ ಅರ್ಜಿ ಭರ್ತಿ ಮಾಡಲೇಬೇಕು. ಬ್ಯಾಂಕ್ ಖಾತೆ, ಆಧಾರ್ ಜೋಡಣೆ , ಪಡಿತರ ಚೀಟಿ ಸಂಖ್ಯೆ ಸಂಬಂಧ ಹಲವು ಪ್ರಶ್ನೆ ಸೇರ್ಪಡೆ ಮಾಡಲಾಗಿದೆ.

ಫಲಾನುಭವಿಯು ಕರ್ನಾಟಕ ರಾಜ್ಯದ ವ್ಯಾಪ್ತಿಯೊಳಗಿನ ಶಾಖೆಯಲ್ಲಿ ಖಾತೆ ಹೊಂದಿರಬೇಕು. ಬ್ಯಾಂಕ್‌ನಲ್ಲಿ ಸಾಲ ಪಡೆಯದ ಖಾತೆಯ ಅಕೌಂಟ್ ನಂಬರ್ ಗೃಹಲಕ್ಷ್ಮಿ ಯೋಜನೆಗೆ ಕೊಡಬೇಕು. ಜಂಟಿ ಖಾತೆ ಕೊಡಬಾರದು.

ಪಡಿತರ ಚೀಟಿ ಸಂಖ್ಯೆ ಕಡ್ಡಾಯ. ಮೊಬೈಲ್‌ಗೆ ಆಧಾರ್ ಸಂಖ್ಯೆ ಆಗದವರು, ಮೊಬೈಲ್‌ಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯ. ಇಂತಹ ಹಲವು ಅಂಶಗಳನ್ನು ಅರ್ಜಿ ಒಳಗೊಂಡಿದೆ. ಮುಖ್ಯಮಂತ್ರಿಗಳಿಂದ ಅಧಿಕೃತ ಸೂಚನೆ ಸಿಕ್ಕ ಬಳಿಕ ಗೃಹಲಕ್ಷ್ಮಿ ಮರುಪರಿಶೀಲನಾ ಅರ್ಜಿ ಸರ್ವೆ ಆರಂಭ ಆಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button