Kannada NewsKarnataka NewsPolitics

*ಸ್ಟಿಂಗ್ ಆಪರೇಷನ್ ಸಾಕ್ಷಿ ಇಲ್ಲಿದೆ: ಪೆನ್ ಡ್ರೈವ್ ಪ್ರದರ್ಶಿಸಿ ಸ್ಫೋಟಕ ಹೇಳಿಕೆ ನೀಡಿದ ಶಾಸಕ ರವಿ ಗಣಿಗ*

ಪ್ರಗತಿವಾಹಿನಿ ಸುದ್ದಿ: ಸಿಎಂ ಹಾಗೂ ಸಚಿವರ ಮೇಲೆ ಸ್ಟಿಂಗ್ ಆಪರೇಷನ್ ನಡೆಸಲಾಗುತ್ತಿದೆ. ಬಿಜೆಪಿ-ಜೆಡಿಎಸ್ ನಾಯಕರು ಖಾಸಗಿ ಏಜೆನ್ಸಿ ಮೂಲಕ ಟ್ರ್ಯಾಪ್ ಗೆ ಯತ್ನಿಸುತ್ತಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸ್ಟಿಂಗ್ ಆಪರೇಷನ್ ಅಂತಾ ಸಿಎಂ ಡಿ.ಕೆ.ಶಿವಕುಮಾರ್ ವಿಪಕ್ಷಗಳ ಮೇಲೆ ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದರು. ಈ ನಡುವೆ ಕಾಂಗ್ರೆಸ್ ಶಸಾಕ ರವಿ ಗಣಿಗ ಪಕ್ಕಾ ಕುಮಾರಸ್ವಾಮಿ ಶೈಲಿಯಲ್ಲಿಯೇ ಪೆನ್ ಡ್ರೈವ್ ಪ್ರದರ್ಶಿಸಿ ಸ್ಟಿಂಗ್ ಆಪರೇಷನ್ ಸಾಕ್ಷಿ ಇಲ್ಲಿದೆ ಎಂದಿದ್ದಾರೆ.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ರವಿ ಗಣಿಗ, ಸ್ಟಿಂಗ್ ಆಪರೇಷನ್ ನಡೆದಿದೆ ಎಂಬುದಕ್ಕೆ ಪೆನ್ ಡ್ರೈವ್ ಪ್ರದರ್ಶಿಸಿ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಇನ್ನೊಂದು ವಾರದಲ್ಲಿ ಸ್ಟಿಂಗ್ ಕುತಂತ್ರದ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇನೆ. ಡಿ.ಕೆ.ಶಿವಕುಮಾರ್ ಸಿಎಂ ಆದಮೇಲೆ ಅಭಿವೃದ್ಧಿ ಶರವೇಗ ಪಡೆದುಕೊಂಡಿದೆ. ಇದನ್ನು ಸಹಿಸದೆ ವಿಪಕ್ಷಗಳ ನಾಯಕರು ಅಪಪ್ರಚಾರ ಮಾಡ್ತಿದ್ದಾರೆ. ಸ್ಟಿಂಗ್ ಆಪರೇಷನ್ ಮಾಡಲು ದೆಹಲಿ ಮೂಲದ ಏಜೆನ್ಸಿಗೆ ಸುಪಾರಿ ನೀಡಲಾಗಿದೆ. ಅವರಿಗೆ ಬೆಂಗಳೂರಿನ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ ಎಂದರು.

ಕೇಂದ್ರ ಸಚಿವರೊಬ್ಬರು, ರಾಜ್ಯದ ಬಿಜೆಪಿ ನಾಯಕರೊಬ್ಬರು ಸೇರಿ ಸ್ಟಿಂಗ್ ಆಪರೇಷನ್​ ನಡೆಸಲು ಸುಪಾರಿ ಕೊಟ್ಟಿದ್ದಾರೆ. ಸಚಿವರನ್ನು ಸ್ಟಿಂಗ್ ಮಾಡಿ ಸರ್ಕಾರಕ್ಕೆ ಮುಜುಗರ ತರುವ ಪ್ಲಾನ್​ ಅವರದ್ದಾಗಿದೆ. ಆದರೆ ನಮ್ಮ ಸಚಿವರು ಶುದ್ಧ ಹಸ್ತರಿದ್ದಾರೆ, ಅವರ ಬಲೆಗೆ ಬಿದ್ದಿಲ್ಲ. ಸ್ಟಿಂಗ್‌ ಮಾಡಿಸಲು ಸುಪಾರಿ ಕೊಟ್ಟಿರುವ ಬಗ್ಗೆ ಎಲ್ಲಾ ದಾಖಲೆ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡ್ತೀನಿ ಎಂದರು.

ಇದು ಹಿಟ್​ ಆ್ಯಂಡ್​​ ರನ್​ ಆಗಲ್ಲ, ಯಾವ ಏಜೆನ್ಸಿ, ಯಾರು ಭಾಗಿಯಾಗಿದ್ದಾರೆ, ಎಷ್ಟು ಹಣ ಕೊಟ್ಟಿದ್ದಾರೆ ಯಾವ್ಯಾವ ಸಚಿವರನ್ನು ಭೇಟಿಯಾಗಿದ್ದಾರೆ, ಯಾವ್ಯಾವ ನಾಯಕರ ಪಿಎಗಳಿದ್ರು ಎಂಬ ಎಲ್ಲಾ ದಾಖಲೆಗಳಿವೆ. ಸಿಸಿಟಿವಿ, ಆಡಿಯೋ, ವೀಡಿಯೋ ಸಮೇತ ದಾಖಲೆ ಇದೆ. ದಾಖಲೆ ಇರುವುದರಿಂದಲೇ ಸಿಎಂ ಕ್ಯಾಬಿನೆಟ್‌ನಲ್ಲಿ ಎಚ್ಚರಿಕೆ ನೀಡಿದ್ರು. ಎಲ್ಲವನ್ನೂ 1 ವಾರದೊಳಗೆ ತನಿಖಾಧಿಕಾರಿ ಮುಂದೆ ದಾಖಲೆ ಇಡುತ್ತೇವೆ ಎಂದು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button