Latest

ತುಟ್ಟಿಯಾಗಲಿವೆ ಆನ್‌ಲೈನ್ ಆಟಗಳು

ಪ್ರಗತಿ ವಾಹಿನಿ ಸುದ್ದಿ ನವದೆಹಲಿ –
ಆನ್ ಲೈನ್ ಗೇಮಿಂಗ್ ಮೇಲಿನ ಜಿಎಸ್‌ಟಿಯನ್ನು ಶೇ.೧೮ರಿಂದ ಶೇ.೨೮ಕ್ಕೆ ಏರಿಸಲು ಕೇಂದ್ರ ಕೇಂದ್ರ ಸರಕಾರ ನಿರ್ಧರಿಸಿದೆ.
 ಪ್ರಸ್ತುತ ಆನ್ ಲೈನ್ ಗೇಮ್‌ಗಳ ಮೇಲಿನ ತೆರಿಗೆ ಶೇ.೧೮ರಷ್ಟಿದ್ದರೂ ಬೆಟ್ಟಿಂಗ್ ಲಾಟರಿ ಮೊದಲಾದ ಚಾನ್ಸ್ ಗೇಮಿಂಗ್‌ಗಳ ಮೇಲಿನ ತೆರಿಗೆ ಶೇ.೨೮ರಷ್ಟಿದೆ. ಆದರೆ ಆನ್‌ಲೈನ್‌ನ ಸ್ಕಿಲ್ ಗೇಮ್ ಮತ್ತು ಚಾನ್ಸ್ ಗೇಮ್ ಎರಡಕ್ಕೂ ಶೇ.೨೮ರಷ್ಟು ಜಿಎಸ್‌ಟಿ ವಿಧಿಸಲು ಕೇಂದ್ರ ಸಚಿವರ ಸಭೆಯಲ್ಲಿ ನಿರ್ಣಯಿಸಲಾಗಿದೆ.
  ಆನ್ ಲೈನ್ ಗೇಮ್ ಕ್ಷೇತ್ರ ವರ್ಷಕ್ಕೆ ೩೦ ಸಾವಿರ ಕೋಟಿ ರೂ. ವಹಿವಾಟಿನದ್ದಾಗಿದೆ. ಶೇ.೨೦-೩೦ರಷ್ಟು ಪ್ರತಿ ವರ್ಷ ವಹಿವಾಟಿನಲ್ಲಿ ಏರಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ತೆರಿಗೆ ವಿಧಿಸುವ ಮೂಲಕ ಸರಕಾರದ ಬೊಕ್ಕಸಕ್ಕೆ ಹೆಚ್ಚು ಹಣ ಹರಿದುಬರುವ  ನಿರೀಕ್ಷೆ ಇದೆ. ಆದಾಗ್ಯೂ ಈ ಕುರಿತು ಜಿಎಸ್‌ಟಿ ಕೌನ್ಸಿಲ್‌ನ ಅಭಿಪ್ರಾಯ ಅಂತಿಮಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button