Kannada NewsKarnataka NewsNational

*ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು*

ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳಿಂದ ತಣ್ಣಗಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಹುಬ್ಬಳ್ಳಿಯ ಹೊರವಲಯದ ಗಾಮನಗಟ್ಟಿ ತಾರಿಹಾಳ ಪ್ರದೇಶದ ಬಳಿ ಕಳ್ಳತನ ಆರೋಪಿ ಫರಾನಾ ಶೇಖ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಪೊಲೀಸರು ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಜುಲೈ 16 ರಂದು ಹುಬ್ಬಳ್ಳಿಯ ರಮೇಶ್ ಭವನ ಬಳಿ ಜಗದೀಶ್ ದೈವಜ್ಞ ಅವರಿಗೆ ಸೇರಿದ ಬಂಗಾರದ ಅಂಗಡಿಯಲ್ಲಿ 850 ಗ್ರಾಮ್ ಚಿನ್ನ 50 ಕೆಜಿ ಬೆಳ್ಳಿ ಕಳ್ಳತನವಾಗಿತ್ತು. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಫರಾನ್ ಶೇಖ್ ಎಂಬಾತನನ್ನು ಪೊಲೀಸರು ವಶಕ್ಕೆ ತಗೆದುಕೊಂಡಿದ್ದರು. ಪೊಲೀಸರು ತಪಾಸಣೆ ಮಾಡಬೇಕಾದರೆ ಪೊಲೀಸ್ ಸಿಬ್ಬಂದಿ ಮಹೇಶ್ ಹಾಗೂ ಸುಜಾತಾ ಮೇಲೆ ಹಲ್ಲೆಗೆ ಯತ್ನಿಸಿದ್ದ. ಆಗ ಮಹಿಳಾ ಪಿಎಸ್‌ಐ ಕವಿತಾ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

Related Articles

Back to top button