Kannada NewsKarnataka NewsNational

*ಬೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು: ಬಿಜೆಪಿ ಸದಸ್ಯೆಯ ಪತಿಯ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಬೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ವಿಜಯಪುರ ‌ಜಿಲ್ಲೆಯ ಚಡಚಣ ಪಟ್ಟಣದ ನೀವರಗಿ ರಸ್ತೆ ಬಳಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಅಶೋಕ ಮಲ್ಲಪ್ಪ ಗಂಟಗಲ್ಲ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Home add -Advt

ಕೊಲೆಗೀಡಾದ ಅಶೋಕ ಪತ್ನಿ ಚಡಚಣ ಪಟ್ಟಣದ ಪುರಸಭೆ ವಾರ್ಡ್ ನಂಬರ್ 2 ರ ಬಿಜೆಪಿ ಸದಸ್ಯೆಯಾಗಿದ್ದಾರೆ. ಇತ್ತೀಚೆಗೆ ಜೈಲಿನಿಂದ ಪೆರೋಲ್ ಮೇಲೆ ಹೊರ ಬಂದಿದ್ದ ಅಶೋಕ, ಕೊಲೆ ಹಾಗೂ ಇತರೆ ಕೇಸ್ ಗಳಲ್ಲಿ ಅಪರಾಧಿಯಾಗಿದ್ದ. ಈತನ ಮೇಲೆ ರೌಡಿ ಶೀಟ್‌ ಕೂಡ ತೆರೆಯಲಾಗಿತ್ತು. ಈತನ ಮನೆಯ ಬಳಿ ಇದ್ದಾಗ ಗುಂಡಿನ ದಾಳಿ ನಡೆಸಿದ ಅಪರಿಚಿತ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಅಶೋಕ ಮೇಲಿನ ಹಳೆ ದ್ವೇಷದಿಂದ ಕೊಲೆ ಮಾಡಿರೋ ಸಂಶಯ ವ್ಯಕ್ತವಾಗಿದೆ.  ಸ್ಥಳಕ್ಕೆ ಚಡಚಣ ಪೊಲೀಸರು ಧಾವಿಸಿದ್ದು,  ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related Articles

Back to top button