Latest

ಧರ್ಮಸಂಸ್ಥಾಪನೆಯ ದೃಷ್ಟಿಯಲ್ಲಿ ಗುರು -ಶಿಷ್ಯ ಪರಂಪರೆಯ ಮಹತ್ವ

ಮೋಹನ ಗೌಡ

ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆಯನ್ನು ಕಾಪಾಡಲಾಗಿದೆ. ಅಲ್ಲದೇ ಈ ಪರಂಪರೆಯೆಂದರೆ ಭಾರತೀಯ ಸಂಸ್ಕೃತಿಯ ಭೂಷಣವಾಗಿದೆ. ‘ಗುರುಗಳ ಮಹತ್ವ’ವೇ ಅದರಲ್ಲಿನ ಮರ್ಮವಾಗಿದೆ. ಶಿಷ್ಯನು ಯಾವ ಸಾಧನೆ ಮಾಡಬೇಕು ಎಂದು ಗುರುಗಳಿಗೆ ತಿಳಿದಿರುತ್ತದೆ. ಅವನಿಗೆ ಕೇವಲ ಸಾಧನೆಯನ್ನು ಹೇಳಿ ಸುಮ್ಮನಾಗದೇ ಅವನಿಂದ ಸಾಧನೆ ಮಾಡಿಸಿಕೊಳ್ಳುತ್ತಾರೆ. ಗುರುಗಳು ನಿಜವಾಗಿ ಇದನ್ನೇ ಕಲಿಸುತ್ತಾರೆ. ಗುರುಗಳ ಗಮನ ಶಿಷ್ಯನ ಐಹಿಕ ಸುಖದ ಕಡೆಗೆ ಇರುವುದಿಲ್ಲ, ಏಕೆಂದರೆ ಅದು ಪ್ರಾರಬ್ಧಕ್ಕನುಸಾರ ಇರುತ್ತದೆ. ಗುರುಗಳ ಗಮನ ಕೇವಲ ಶಿಷ್ಯನ ಆಧ್ಯಾತ್ಮಿಕ ಉನ್ನತಿಯ ಕಡೆಗೆ ಇರುತ್ತದೆ. ಶ್ರೀ ಶಂಕರಾಚಾರ್ಯರು ಹೇಳಿದ್ದಾರೆ, ‘ಜ್ಞಾನದಾನ ಮಾಡುವ ಸದ್ಗುರುಗಳಿಗೆ ಶೋಭಿಸುವಂತಹ ಉಪಮೆ ಈ ತ್ರಿಭುವನದಲ್ಲಿ ಎಲ್ಲಿಯೂ ಇಲ್ಲ. ಅವರಿಗೆ ಸ್ಪರ್ಶಮಣಿಯ (ಪಾರಸಮಣಿ) ಉಪಮೆಯನ್ನು ನೀಡಿದರೂ ಅದು ಅಪೂರ್ಣವಾಗುವುದು; ಏಕೆಂದರೆ ಸ್ಪರ್ಶಮಣಿಯು ಕಬ್ಬಿಣವನ್ನು ಸುವರ್ಣವನ್ನಾಗಿ ಮಾಡಿದರೂ, ಅದರ ಗುಣವನ್ನು ಕೊಡಲು ಸಾಧ್ಯವಿಲ್ಲ (ಅಂದರೆ ಕಬ್ಬಿಣವು ಸ್ಪರ್ಶಮಣಿಯ ಗುಣವನ್ನು ಪಡೆಯುವುದಿಲ್ಲ).

ಗುರುಗಳ ಮಹತ್ವವನ್ನು ವರ್ಣಿಸಲು ಶಿಷ್ಯನಿಗೆ ಶಬ್ದಗಳು ಸಾಕಾಗುವುದಿಲ್ಲ. ಗುರುಗಳು ಒಳಗೂ ಇದ್ದಾರೆ, ಹೊರಗೂ ಇದ್ದಾರೆ. ನೀವು ಅಂತರ್ಮುಖರಾಗುವಂತಹ ಪರಿಸ್ಥಿತಿಯನ್ನು ಗುರುಗಳು ನಿರ್ಮಿಸುತ್ತಾರೆ. ನಿಮ್ಮನ್ನು ಆತ್ಮದ ಕಡೆಗೆ ಅಂದರೆ ಬ್ರಹ್ಮನ ಕಡೆಗೆ ಸೆಳೆಯಬೇಕೆಂದು ಗುರುಗಳು ಒಳಗೆ ಅಂದರೆ ಹೃದಯದಲ್ಲಿ ಸಿದ್ಧತೆ ಮಾಡುತ್ತಾ ಇರುತ್ತಾರೆ.

ಹಿಂದೂ ಸಂಸ್ಕೃತಿಯಲ್ಲಿ ಗುರುಗಳು ಶಿಷ್ಯನಿಂದ ಮಾಡಿಸಿಕೊಂಡಿರುವ ಕಾರ್ಯಗಳನ್ನು ಅನೇಕ ಉದಾಹರಣೆಗಳ ಮೂಲಕ ಬಣ್ಣಿಸಬಹುದು.

ಗುರು – ಶಿಷ್ಯ

1) ವಸಿಷ್ಠ ಋಷಿ – ಶ್ರೀರಾಮಚಂದ್ರ

2) ಯಾಜ್ನ್ಯವಲ್ಕ್ಯ ಋಷಿ – ರಾಜಾ ಜನಕ

3) ರಾಜಾ ಜನಕ – ಶುಕ ಋಷಿ

4) ಶುಕ್ರಾಚಾರ್ಯ – ಕಚ

5) ಸಾಂದೀಪನಿ – ಕೃಷ್ಣ ಮತ್ತು ಸುದಾಮಾ

6) ದ್ರೋಣಾಚಾರ್ಯ – ಅರ್ಜುನ ಮತ್ತು ಏಕಲವ್ಯ

7) ಪರುಶುರಾಮ – ಭೀಷ್ಮಾಚಾರ್ಯ ಮತ್ತು ಕರ್ಣ

8) ಗೋವಿಂದಪೂಜ್ಯಪಾದ – ಆದಿ ಶಂಕರಾಚಾರ್ಯ

9) ಆರ್ಯ ಚಾಣಕ್ಯ – ಸಾಮ್ರಾಟ್ ಚಂದ್ರಗುಪ್ತ ಮೌರ್ಯ

10) ನಿವೃತ್ತಿನಾಥ್ – ಜ್ಞಾನದೇವ

11) ಜನಾರ್ಧನಸ್ವಾಮಿ – ಏಕನಾಥ್ ಮಹಾರಾಜ್

12) ಸಮರ್ಥ ರಾಮದಾಸ್ ಸ್ವಾಮಿ – ಶಿವಾಜಿ ಮಹಾರಾಜ್ (ಮಾನಸ ಶಿಷ್ಯ : ಭಗವಾನ್ ಶ್ರೀಧರ್ ಸ್ವಾಮಿ ಮಹಾರಾಜ್)

13) ರಾಮಕೃಷ್ಣ ಪರಮಹಂಸ – ಸ್ವಾಮಿ ವಿವೇಕಾನಂದ

ಆರ್ಯ ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯ, ಸಮರ್ಥ ರಾಮದಾಸಸ್ವಾಮಿ ಮತ್ತು ಛತ್ರಪತಿ ಶಿವಾಜಿ ಮಹಾರಾಜ, ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಮುಂತಾದ ಗುರು-ಶಿಷ್ಯರ ಜೋಡಿಗಳು ಮತ್ತು ಅವರ ಅದ್ವಿತೀಯ ಕಾರ್ಯವು ಇಂದು ಜಗತ್ಪ್ರಸಿದ್ಧವಾಗಿದೆ. ಇವೆಲ್ಲ ಉದಾಹರಣೆಗಳಿಂದ ಅಧರ್ಮದ ವಿರುದ್ಧ ಹೋರಾಡುವ ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶವು ಎಲ್ಲೆಡೆ ಹರಡಿದೆ. ವರ್ತಮಾನ ಕಾಲದ ಅಧರ್ಮಾಚರಣಿ ವಾತಾವರಣವನ್ನು ಗಮನಿಸಿ ಗುರು-ಶಿಷ್ಯ ಸಂಬಂಧದ ಅನುಭವ ಹಾಗೂ ಅದರಿಂದ ಧರ್ಮಾಚರಣಿ ರಾಜ್ಯ ಸ್ಥಾಪನೆಯ ಅವಶ್ಯಕತೆ ಗಮನಕ್ಕೆ ಬರುತ್ತದೆ.

ಆಧಾರ – http://Sanatan.org/Kannada ಜಾಲತಾಣ

( ಲೇಖಕರು – ಮೋಹನ ಗೌಡ,
ಹಿಂದೂ ಜನಜಾಗೃತಿ ಸಮಿತಿ
ಮೊಬೈಲ್ ನಂ 7204082609)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button