Belagavi NewsBelgaum NewsKannada NewsKarnataka NewsLatest

ಸೆ.22ರಂದು ಗುರುವಂದನಾ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸ್ವರಸಾಧನಾ ಸಂಗೀತ ಮಹಾವಿದ್ಯಾಲಯದ ವತಿಯಿಂದ  ಸೆಪ್ಟೆಂಬರ್ 22, ರವಿವಾರದಂದು ಬೆಳಗಾವಿ ಕೋರೆ ಗಲ್ಲಿಯ ಸರಸ್ವತಿ ವಚನಾಲಯದಲ್ಲಿ ಪಂಡಿತ ಪಲುಸ್ಕರ್ ಅವರ ಪುಣ್ಯಸ್ಮರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬೆಳಗಾವಿಯ ಕಲಾವಿದರಿಗೆ ಸನ್ಮಾನ ಹಾಗೂ ಸ್ವರಾಸಾಧನಾ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಗಾಯನ ಹಾಗೂ ಸುಗಮ ಸಂಗೀತವನ್ನು ಹಮ್ಮಿಕೊಳ್ಳಲಾಗಿದೆ.

Home add -Advt

ತಬಲಾ ಸಾಥೀದಾರರಾಗಿ ಜಿತೇಂದ್ರ ಸಾಬಣ್ಣವರ್, ನಿತಿನ್ ಸುತಾರ್ ಹಾಗೂ ಸಂಚಿತ ಪಾಟೀಲ ಮತ್ತು ಹಾರ್ಮೋನಿಯಂ ಸಾಥೀದಾರರಾಗಿ ಕುಮಾರಿ ಚೈತ್ರಾ ಅಧ್ಯಾಪಕ ಹಾಗೂ ಶೃತಿ ಪಾಟೀಲ ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ವಿದ್ಯಾಲಯದ ಮುಖ್ಯಸ್ಥೆ ಸೀಮಾ ಕುಲಕರ್ಣಿ ತಿಳಿಸಿದ್ದಾರೆ.

Related Articles

Back to top button