Belagavi NewsBelgaum NewsLatest
ನಿಧನ ವಾರ್ತೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಗ್ರಾಮದ ನಿವೃತ್ತ ಶಿಕ್ಷಕಿ ಶಕುಂತಲಾ ಮಲ್ಲಾರಿ ಮಲಪೂರೆ (88) ಬುಧವಾರ ವಯೋ ಸಹಜ ಕಾಯಿಲೆಯಿಂದ ನಿಧನರಾದರು.
ಶಕುಂತಾಲಾ ಅವರು ಮೂಡಲಗಿ, ಗೋಕಾಕ, ಯಕ್ಷಂಬಾ, ನನದಿ ಮುಂತಾದ ಕಡೆ ಸುಮಾರು 40 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತರಿಗೆ ಬೆಳಗಾವಿಯ ಖ್ಯಾತ ಮಕ್ಕಳ ಶಸ್ತ್ರ ಚಿಕಿತ್ಸಕ ಡಾ.ಶಂಕರ ಮಲಪೂರೆ, ನಿವೃತ್ತ ಕೆವಿಜಿ ಬ್ಯಾಂಕ್ ಅಧಿಕಾರಿ ಶ್ರೀಮತಿ ರಾಜಶ್ರೀ ಅಶೋಕ ಚಿತಳೆ, ಶಿಕ್ಷಕಿ ಶ್ರೀಮತಿ ಪುಷ್ಪಾ ಭೀಮರಾವ್ ನಾಡಕರ್ಣಿ ಸೇರಿದಂತೆ ಮೊಮ್ಮಕ್ಕಳಾದ ಪ್ರಸೂತಿ ತಜ್ಞರು ಡಾ. ಪ್ರೀತಿ ಮಲಪೂರೆ, ಡಾ.ಅನುಷಾ ಮಲಪೂರೆ, ಹಿರಿಯ ದಂತ ವೈದ್ಯಾಧಿಕಾರಿ ಡಾ.ಜ್ಯೋತಿ ಚಿತಳೆ, ಅಪಾರ ಪ್ರಮಾಣದ ಬಂಧು, ಬಳಗ ಇದ್ದಾರೆ.
ಅಂತ್ಯಕ್ರಿಯೆ ಚಿಂಚಣಿ ಗ್ರಾಮದ ರುಧ್ರಭೂಮಿಯಲ್ಲಿ ನೆರವೇರಿಸಲಾಯಿತು.



