

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕುದ್ರೆಮನಿ, ಗೆಜಪತಿ, ಧಾಮಣೆ ಎಸ್ ಬಿ ಗ್ರಾಮದಲ್ಲಿ ನೂತನ ಸಮುದಾಯ ಭವನಗಳ ನಿರ್ಮಾಣದ ಸಲುವಾಗಿ ಕೊನೆಯ ಹಂತದ ಚೆಕ್‌ಗಳನ್ನು ಆಯಾ ದೇವಸ್ಥಾನಗಳ ಟ್ರಸ್ಟ್ ಕಮೀಟಿಯವರಿಗೆ ವಿಧಾನ ಪರಿಷತ್ ಸದಸ್ಯ ಟನ್ನರಾಜ ಹಟ್ಟಿಹೊಳಿ ಸೋಮವಾರ ಹಸ್ತಾಂತರಿಸಿದರು.
ಇದೇ ಸಮಯದಲ್ಲಿ ಬೆನಕನಹಳ್ಳಿ(ಗಣೇಶಪುರ) ಗ್ರಾಮಕ್ಕೆ ಜಿಮ್ ಸೆಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಸಹ ವಿತರಿಸಿದರು, ಇದರೊಂದಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಒಟ್ಟು 25 ಗ್ರಾಮಗಳಿಗೆ ಜಿಮ್ ಸೆಟ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಹಸ್ತಾಂತರಿಸಿದಂತಾಗಿದೆ.
ಈ ಸಮಯದಲ್ಲಿ ಮನೋಹರ ಬಾಂಡೇಕರ್, ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರು ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ