Latest

ಹೆಚ್.ಡಿ.ದೇವೇಗೌಡರ ಪತ್ನಿ ಚನ್ನಮ್ಮಗೆ IT ಶಾಕ್

ಪ್ರಗತಿವಾಹಿನಿ ಸುದ್ದಿ; ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ನೋಟಿಸ್ ನೀಡಿದ್ದು, ಆಸ್ತಿ ವಿವರದ ಬಗ್ಗೆ ಮಾಹಿತಿ ಕೇಳಿದ್ದಾರೆ ಎಂದು ಶಾಸಕ ಹೆಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ.ರೇವಣ್ಣ, ಐಟಿ ಅಧಿಕಾರಿಗಳು ನಮ್ಮಮ್ಮ ಚೆನ್ನಮ್ಮ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ನಮ್ಮಮ್ಮ, ನಮ್ಮಪ್ಪ ಕೋಟ್ಯಂತರ ರೂಪಾಯಿ ಮಾಡಿದ್ದಾರೇನು? ಜೆಡಿಎಸ್ ನವರನ್ನು ಹುಡುಕಿ ಹುಡುಕಿ ನೋಟಿಸ್ ಕೊಡುತ್ತಿದ್ದಾರೆ. ನನಗೂ ಕೊಡಲಿ. ನಾನು ಉತ್ತರಿಸುತ್ತೇನೆ. ನಾನು ಆಲೂಗಡ್ಡೆ ಬೆಳೆದಿದ್ದೆ. ಈಗ ಕಬ್ಬು ಬೆಳೆದಿದ್ದೇನೆ. ಕಬ್ಬು ಬೆಳೆ ಬೆಳೆದಿರುವುದನ್ನು ನೋಡಲು ನೋಟಿಸ್ ನೀಡಲಿ ಎಂದು ಗುಡುಗಿದರು.

ಆರ್ ಟಿಒ ಅಧಿಕಾರಿಗಳು, ಸಿಬ್ಬಂದಿಗಳು ನೂರಾರು ಕೋಟಿ ಲೂಟಿ ಮಾಡುತ್ತಿದ್ದಾರೆ ಅವರಿಗೆ ನೋಟಿಸ್ ನೀಡುವವರು ಯಾರು? ಅವರನ್ನು ಬಿಟ್ಟು ಚೆನ್ನಮ್ಮ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ದ್ವೇಷದ ರಾಜಕಾರಣ ಯಾವ ಮಟ್ಟಕ್ಕೆ ಹೋಗಿದೆ ನೋಡಿ ಎಂದು ವಾಗ್ದಾಳಿ ನಡೆಸಿದರು

ಇದೇ ವೇಳೆ ಬೇಲೂರು ಚೆನ್ನಕೇಶವ ದೇಗುಲದ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರೇವಣ್ಣ, ಹಾಸನದಲ್ಲಿ ಹಿಂದೂ, ಮುಸ್ಲಿಂ ಐಕ್ಯತೆಯಿಂದ ಬದುಕುತ್ತಿದ್ದಾರೆ. ಹಿಂದೂ ಬೇರೆಯಲ್ಲ, ಮುಸ್ಲಿಂ ಬೇರೆಯಲ್ಲ. ಮುಸ್ಲಿಂರಿಗೆ ಬೇರೆ ರೀತಿ ಅಡ್ಡಿಪಡಿಸಿದ್ರೆ ಕಾನೂನು ರೀತಿಯ ಕ್ರಮ ಕೈಗೊಳ್ಳಿ. ಎಲ್ಲಾ ಸಮಾಜದವರು ಒಟ್ಟಾಗಿ ಸಾಮರಸ್ಯದಿಂದ ಬದುಕಬೇಕು. ಯಾರೋ ಕೇಸರಿ ಶಾಲು ಹಾಕಿಕೊಂಡು ಬಂದು ಹೇಳಿದರೆ ಕೇರ್ ಮಾಡಲ್ಲ, ಮುಸ್ಲಿಂ ಆಗಿ ಹುಟ್ಟಿ ಜೀವನ ಮಾಡಬೇಡಿ ಅನ್ನೋಕೆ ಆಗುತ್ತಾ? ಬೇಲೂರಾಗಲಿ, ಹೊಳೆನರಸಿಪುರ ಇರಲಿ ಎಲ್ಲಿಯೂ ನಿರ್ಬಂಧ ಹೇರುವಂತಿಲ್ಲ ಎಂದು ಹೇಳಿದರು.
ಸತತ ಎಡರನೇ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button