Latest

*JDS ವಿಸರ್ಜನೆಯ ಕನಸು ಕಾಣ್ತಿದ್ದಾರಾ? ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ HDK*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಕುಮಾರಣ್ಣ ಜೆಡಿಎಸ್ ವಿಸರ್ಜನೆ ಮಾಡುತ್ತಿದ್ದಾರೆ. ಕಾರ್ಯಕರ್ತರು ಕಾಂಗ್ರೆಸ್ ಗೆ ಬರಲಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವಿಸರ್ಜನೆಯ ಕನಸು ಕಾಣ್ತಿದ್ದಾರಾ? ಜನಕ್ಕೇನು ಅರ್ಥ ಆಗಲ್ವಾ? ಎಂದು ಪ್ರಶ್ನಿಸಿದ್ದಾರೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ನಾನು ಜೆಡಿಎಸ್ ವಿಸರ್ಜನೆ ಮಾಡುವ ಕನಸು ಕಾಣುತ್ತಿದ್ದಾರಾ? ಜನರಿಗೆನು ಅರ್ಥ ಆಗಲ್ವಾ? ಪಂಚರತ್ನ ಯೋಜನೆ ಜಾರಿ ಮಾಡದಿದ್ದರೆ ಜೆಡಿಎಸ್ ವಿಸರ್ಜನೆ ಎಂದಿದ್ದು ಎಂದು ಹೇಳಿದ್ದಾರೆ.

Related Articles

ಜನ ಅಧಿಕಾರ ಕೊಡುವುದು ಪಕ್ಷ ವಿಸರ್ಜನೆ ಮಾಡಲಿಕ್ಕೇನು? ಈ ಪಕ್ಷವನ್ನು ದೇಶದ ಮಟ್ಟಕ್ಕೆ ಕೊಂಡೊಯ್ಯಲು ಜನ ಅಧಿಕಾರ ಕೊಡುತ್ತಾರೆ. ಜೆಡಿಎಸ್ ಜಿಲ್ಲೆ, ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿ ಬೆಳಗಲಿದೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ಸಿದ್ಧಾಂತದ ಮೇಲೆ ಹೋಗುತ್ತೇನೆ ಎಂದಿದ್ದಾರೆ. ಅವರು ಯಾವ ಸಿದ್ಧಾಂತದ ಮೇಲೆ ಹೋಗುತ್ತಾರೆ? ಅವರಿಗೆ ಎಲ್ಲಿದೆ ಸಿದ್ಧಾಂತ ಎಂದು ವಾಗ್ದಾಳಿ ನಡೆಸಿದ್ದಾರೆ.

Home add -Advt

*ಕುಮಾರಣ್ಣ ಪಕ್ಷ ವಿಸರ್ಜನೆ ಮಾಡುತ್ತಿದ್ದಾರೆ; ಎಲ್ಲರೂ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕರೆ ಕೊಟ್ಟ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarjdsbjp-govt/

Related Articles

Back to top button