Latest

ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು ಕಾರಣವೇನು ಗೊತ್ತೇ?

ಪ್ರಗತಿವಾಹಿನಿ ಸುದ್ದಿ; ಹಾಸನ: ಆರ್.ಎಸ್.ಎಸ್ ಬಗ್ಗೆ ನಾನು ಹೇಳಿದ್ದು ಕೇವಲ ಹಿಟ್ ಆಂಡ್ ರನ್ ಅಲ್ಲ, ನಾನು ಸೂಕ್ತವಾದ ಮಾಹಿತಿಯನ್ನು ಇಟ್ಟುಕೊಂಡೇ ಮಾತನಾಡಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜಕೀಯವಾಗಿ ಮತ್ತೊಂದು ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲು, ಸಿಎಂ ಹುದ್ದೆಯಿಂದ ಕೆಳಗಿಳಿಯಲು ಆರ್.ಎಸ್.ಎಸ್ ಕಾರಣ. ಆರ್.ಎಸ್.ಎಸ್ ಬಗ್ಗೆ ನನ್ನ ಹೇಳಿಕೆ ಹಿಟ್ ಆಂಡ್ ರನ್ ಅಲ್ಲ, ನಿಜ ಏನೆಂಬುದನ್ನು ರಾಜ್ಯದ ಜನರೇ ಚರ್ಚಿಸಲಿ ಎಂದು ತಿಳಿಸಿದ್ದಾರೆ.

ಆರ್.ಎಸ್.ಎಸ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕೆ ಬಾಯಿ ತಪ್ಪಿ ಮಾತನಾಡಿದ್ದಾರೆ, ಅವರೊಂದಿಗೆ ನಾನೇ ಖುದ್ದು ಮಾತನಾಡುತ್ತೇನೆ ಅವರಿಗೆ ತಪ್ಪು ಗ್ರಹಿಕೆಯಾಗಿರಬೇಕು ಎಂದು ಹೇಳಿದ್ದರು. ಬಿಎಸ್ ವೈ ಹೇಳಿಕೆ ಬೆನ್ನಲ್ಲೇ ತಿರುಗೇಟು ನೀಡಿರುವ ಕುಮಾರಸ್ವಾಮಿ, ಬಿಎಸ್ ವೈ ಅಧಿಕಾರ ಹೋಗಲು ಆರ್.ಎಸ್.ಎಸ್ ಕಾರಣ. ಆರ್.ಎಸ್.ಎಸ್ ಬಗ್ಗೆ ನಾನೇನು ಪ್ರಾರಂಭ ಮಾಡಿದ್ದೇನೆ ಅದು ಕೇವಲ ಆರೋಪ ಮಾತ್ರವಲ್ಲ, ನನಗೆ ಸೂಕ್ತ ಮಾಹಿತಿ ಇದೆ. ಯಡಿಯೂರಪ್ಪ ನನ್ನ ಜೊತೆ ಮಾತನಾಡುತ್ತಾರಂತೆ ಮಾತನಾಡಲಿ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆಶಿ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button