Latest

HDK ಬ್ಲ್ಯಾಕ್ ಮೇಲರ್, ಗೂಂಡಾ ಸಂಸ್ಕೃತಿಗೆ ಮುನ್ನುಡಿ ಬರೆದಿದ್ದಾರೆ ಎಂದ CPY; ಯೋಗೇಶ್ವರ್ ನಿಂದ ದುಡ್ದು ಹೊಡೆಯೋ ಪ್ಲಾನ್; ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಪ್ರಗತಿವಾಹಿನಿ ಸುದ್ದಿ; ರಾಮನಗರ: ಚನ್ನಪಟ್ಟಣದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ವೇಳೆ ಜೆಡಿಎಸ್ ಕಾರ್ಯಕರ್ತರ ಪ್ರತಿಭಟನೆ ಹಾಗೂ ತಮ್ಮ ಕಾರಿನ ಮೇಲೆ ಕಲ್ಲು, ಮೊಟ್ಟೆ ತೂರಾಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದು ಗೂಂಡಾ ಸಂಸ್ಕೃತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಯೋಗೇಶ್ವರ್, ಸರ್ಕಾರದ ಹಲವು ಕಾರ್ಯಕ್ರಮಗಳಿಗೆ ಇಂದು ಚಾಲನೆ ನೀಡಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವತ್ಥನಾರಾಯಣ ಅವರು ಅನಿವಾರ್ಯ ಕಾರಣಗಳಿಂದ ಬಂದಿಲ್ಲ. ಹಾಗಾಗಿ ಸಚಿವರ ಸೂಚನೆ ಮೇರೆಗೆ ನಾನು ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಆದರೆ ಕುಮಾರಸ್ವಾಮಿಯವರು ಅಭಿವೃದ್ಧಿಕಾರ್ಯಗಳನ್ನು ತಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಬೇರೆ ಜಿಲ್ಲೆಗಳಿಂದ ಗೂಂಡಾಗಳನ್ನು ಕರೆಸಿ ದಾಂಧಲೆ ನಡೆಸಿದ್ದಾರೆ. ನನ್ನ ಕಾರಿನ ಮೇಲೆ ಕಲ್ಲು ಎಸೆದಿದ್ದು ಬಾಡಿಹೆ ಗೂಂಡಾಗಳು. ಚೆನ್ನಪಟ್ಟಣಕ್ಕೆ ಅನುದಾನ ತಂದಿದ್ದು ನಾನು. ಹೆಚ್.ಡಿ.ಕೆ ಅದನ್ನು ತಡೆಯಲು ಯತ್ನಿಸಿದ್ದಾರೆ. ಹೆಚ್ ಡಿಕೆ ಒಬ್ಬ ಬ್ಲ್ಯಾಕ್ ಮೇಲರ್, ಗೂಂದಾ ಸಂಸ್ಕೃತಿಗೆ ಮುನ್ನುಡಿ ಬರೆದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿ.ಪಿ.ಯೋಗೇಶ್ವರ್ ಆರೋಪಕ್ಕೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಸರ್ಕಾರದ ನಿಯಮಾವಳಿಗಳನ್ನೇ ಗಾಳಿಗೆ ತೂರಿ ಇಂದು ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ನನಗೇ ಮಾಹಿತಿ ಮರೆ ಮಾಚಲು ಹೋಗಿದ್ದಾರೆ. ಕಾರ್ಯಕ್ರಮ ರದ್ದು ಎಂದು ನಿನ್ನೆ ರಾತ್ರಿ ಪತ್ರ ಬರೆದು ಇಂದು ಗುದ್ದಲಿ ಪೂಜೆ, ಕಾಮಗಾರಿ ಚಾಲನೆ ವೇಳೆ ಪತ್ರ ಬರೆದವರೇ ಓಡಾಡುತ್ತಿದ್ದಾರೆ. ಅನುದಾನದ ಹಣವನ್ನು ಹೊಡೆಯಲು ಸಿ.ಪಿ.ಯೋಗೇಶ್ವರ್ ನಡೆಸುತ್ತಿರುವ ಪ್ಲಾನ್ ಇದು ಎಂದು ಕಿಡಿಕಾರಿದ್ದಾರೆ.

ಮೈತ್ರಿ ಸರ್ಕಾರ ತೆಗೆಯಲು ಯೋಗೇಶ್ವರ್ ಪಾತ್ರವೇನು? ಅವರು ಎಲ್ಲಿಂದ ಹಣ ತಂದ್ರು ಎಂಬುದು ಗೊತ್ತಿದೆ. ಈಗ ಆ ವಿಚಾರದ ಚರ್ಚೆ ಬೇಡ. ಯೋಗೇಶ್ವರ್ ಗೆ ಕಳೆದ ಮೂರು ವರ್ಷಗಳಿಂಗ ಚೆನ್ನಪಟ್ಟಣದ ಬಗ್ಗೆ ಇರದ ಕಾಳಜಿ ಈಗ ಯಾಕೆ? ಈವರೆಗೆ ಯಾರು ಅವರಿಗೆ ಅಭಿವೃದ್ಧಿ ಮಾಡುವುದು ಬೇಡ ಅಂದ್ರು? ಇಷ್ಟುದಿನ ಏನೂ ಮಾಡಿಲ್ಲ. ಈಗ ಚುನಾವಣೆಗೆ 6 ತಿಂಗಳು ಇರುವಾಗ ಕ್ಷೇತ್ರದ ಅಭಿವೃದ್ಧಿ ಎಂದು ನೆನಪಾಗಿ ಬಂದಿದ್ದಾರೆ. ಸರ್ಕಾರದ ಅನುದಾನದ ಹಣ ಇರುವುದು ಬೇಕಾಬಿಟ್ಟಿ ಖರ್ಚು ಮಾಡಲು ಅಲ್ಲ. ಅದು ಜನರ ತೆರಿಗೆ ಹಣ. ಅಭಿವೃದ್ಧಿ ವಿಚಾರವಾಗಿ ನಾನು ರಾಜಕೀಯ ಮಾಡಲ್ಲ. ಓರ್ವ ಮಾಜಿ ಸಿಎಂ ಕ್ಷೇತ್ರದಲ್ಲಿ ಬಂದು ದಬ್ಬಾಳಿಕೆ ನಡೆಸುತ್ತಿರುವುದು ಸರಿಯಲ್ಲ ಎಂದು ಗುಡುಗಿದರು.

ಸಾವಿರಾರು ಪೊಲೀಸರು, ಬೆಟಾಲಿಯನ್ ನಿಲ್ಲಿಸಿ ಶಂಕುಸ್ಥಾಪನೆ ಮಾಡಿದ್ದಾರೆ. ಶಂಕು ಸ್ಥಾಪನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಯಾಕೆ ಹೋಗಿಲ್ಲ. ಪರಿಷತ್ ನ ನಾಲ್ಕು ಚೇಲಾಗಳನ್ನು ಇಟ್ಟುಕೊಂಡು ಮಾಡುತ್ತಿದ್ದೀರಾ? ಆಫೀಸ್ ಗಳು ಅವರ ಜೊತೆ ಇದ್ದುಕೊಂಡೇ ಗುದ್ದಲಿಪೂಜೆ ಮಾಡುತ್ತೀರಾ? ನಿಯಮ ಉಲ್ಲಂಘನೆ ಮಾಡಿದವರನ್ನು ಅರೆಸ್ಟ್ ಮಾಡಬೇಕು. ಚೆನ್ನಪಟ್ಟಣದಲ್ಲಿ ಈ ರೀತಿ ದಬ್ಬಾಳಿಕೆ, ದೌರ್ಜನ್ಯ ನಡೆಸಿದರೆ ನಾನು ಹೆದರುವುದಿಲ್ಲ. ನನ್ನ ಶಕ್ತಿ ಕುಂದಿಸಲು ಆಗಲ್ಲ. ಬಿಎಂ ಎಸ್ ಹಗರಣ ತನಿಖೆಯಾದ್ರೆ ಯಾರ ಮೇಲೆ ಉರುಳುತ್ತೆ… ತನಿಖೆಯಾದರೆ ಒಬ್ಬೊಬ್ಬರ ಇತಿಹಾಸ ಹೊರ ಬರುತ್ತೆ. ದಮ್, ತಾಕತ್ತು ಎಂದು ಹೇಳಿದರೆ ತೋರಿಸೋಕೆ ನಾವೂ ಸಿಎಂಗೆ ರೆಡಿ ಇದ್ದೇವೆ ಎಂದು ಎಚ್ಚರಿಕೆ ವಾಗ್ದಾಳಿ ನಡೆಸಿದ್ದಾರೆ.

ಸಿ.ಪಿಯೋಗೇಶ್ವರ್ ಕಾರಿನ ಮೇಲೆ ಮೊಟ್ಟೆ, ಕಲ್ಲು ತೂರಾಟ; JDS ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿಚಾರ್ಜ್

https://pragati.taskdun.com/latest/ramanagarac-p-yogeshwarcarthroweggjds-workers/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button