
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಲು ಆರ್ ಎಸ್ ಎಸ್ ಹುನ್ನಾರ ನಡೆಸಿದೆ ಎಂಬ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ನಾನು ಯಾವುದೇ ಸಮುದಾಯದ ವಿರೋಧಿಯಲ್ಲ, ಜೋಶಿ ವಿರೋಧಿಯೂ ಅಲ್ಲ, ಜೋಶಿ ಅವರನ್ನು ಸಿಎಂ ಮಾಡುವುದಾದರೆ ಬಿಜೆಪಿಯವರು ಚುನಾವಣೆಗೂ ಮೊದಲೇ ಘೋಷಣೆ ಮಾಡಲಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿಯವರು ಚುನಾವಣೆಗೆ ಮೊದಲು ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.
ನಾನು ಯಾವುದೇ ಸಮುದಾಯದ ವಿರೋಧಿಯಲ್ಲ. ಬ್ರಾಹ್ಮಣರು ಸಿಎಂ ಆದರೆ ನನಗೇನೂ ವಿರೋಧವಿಲ್ಲ. ಬ್ರಾಹ್ಮಣರಲ್ಲಿಯೂ ಮುಖ್ಯಮಂತ್ರಿ ಆಗುವ ಅರ್ಹತೆ ಇರುವವರು ಇದ್ದಾರೆ ಎಂದರು.
ಬಿಜೆಪಿಯವರು ಈಗಾಗಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಅಮಿತ್ ಶಾ ಅವರ ಕಾರ್ಯಕ್ರಮದ ವೇದಿಕೆಯಿಂದ ಹೊರಗಿಟ್ಟರು. ಚುನಾವಣೆ ಮುಗಿದ ಮೇಲೆ ಜೋಶಿ ಸಿಎಂ ಆಗ್ತಾರೆ ಎಂಬ ಮಾಹಿತಿ ಇದೆ. ಬಿಜೆಪಿಯಲ್ಲಿ 8 ಜನ ಡಿಸಿಎಂ ಆಗುವ ಬಗ್ಗೆಯೂ ಈಗಗಾಲೇ ಚರ್ಚೆ ಆಗಿದೆ. ಆ 8 ಜನ ಯಾರ್ಯಾರು ಎಂಬುದೂ ಗೊತ್ತಿದೆ. ಅದಕ್ಕೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಅಂತಾ ನಾನು ಹೇಳಿದ್ದೇನೆ ಅಷ್ಟೇ ಎಂದು ಹೇಳಿದ್ದಾರೆ.
*ನರ್ಸಿಂಗ್, ಪ್ಯಾರಾಮೆಡಿಕಲ್ ನ 137 ವಿದಾರ್ಥಿಗಳು ಅಸ್ವಸ್ಥ; 12 ಜನರ ಸ್ಥಿತಿ ಗಂಭೀರ*
https://pragati.taskdun.com/mangalore137-nursing-studentsill/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ