Latest

ನಿರೀಕ್ಷೆ ಈಡೇರಿಸಲು ಹಿಂದಿರುವವರು ಬಿಡಬೇಕಲ್ವಾ… ಎಂದ ಕುಮಾರಸ್ವಾಮಿ: ಹಿಂದಿರುವವರು ಯಾರು?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೊದಲ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಡವರಿಗೆ ಯಾವ ಕಾರ್ಯಕ್ರಮ ಕೊಡ್ತಾರೋ ನೋಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬೊಮ್ಮಾಯಿ ಸುದೀರ್ಘ ಆಡಳಿತ ಅನುಭವ ಹೊಂದಿದ್ದಾರೆ. ಸಿಎಂ ಬೊಮ್ಮಾಯಿ ಬಜೆಟ್ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆಯಿದೆ. ಆದರೆ ಆ ನಿರೀಕ್ಷೆ ಈಡೇರಿಸಲು ಅನುಮತಿ ಕೊಡಬೇಕಲ್ಲವೇ? ಎಂದರು.

ಕಾರ್ಯಕ್ರಮಗಳನ್ನು ಕೊಡಲು ಅವರ ಹಿಂದೆ ಇರುವವರು ಬಿಡಬೇಕಲ್ಲವೇ? ಎಂದು ಪರೋಕ್ಷವಾಗಿ ಆರ್ ಎಸ್ ಎಸ್ ವಿರುದ್ಧ ಮಾತನಾಡಿದ್ದಾರೆ.

ಉಕ್ರೇನ್ ಪರಮಾಣು ವಿದ್ಯುತ್ ಸ್ಥಾವರದ ಮೆಲೆ ರಷ್ಯಾ ದಾಳಿ; ಸ್ಫೋಟದ ತೀವ್ರತೆಗೆ ಹೊತ್ತಿಕೊಂಡ ಬೆಂಕಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button