ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗ್ಲೀಸರೀನ್ ಹಾಕಿಕೊಂಡು ಕಣ್ಣೀರು ನಾಟಕವಾಡುತ್ತಿದ್ದಾರೆ ಎಂಬ ಎಸ್.ಆರ್.ಶ್ರೀನಿವಾಸ್ ಟೀಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ ತಮ್ಮ ಕೈಲಿದ್ದ ಕರ್ಚೀಫ್ ನ್ನು ಪತ್ರಕರ್ತರ ಮುಂದಿಟ್ಟು ಚೆಕ್ ಮಾಡಿ ನೋಡಿ ಎಂದು ಹೇಳಿದ ಪ್ರಸಂಗ ವಿಜಯಪುರದಲ್ಲಿ ನಡೆದಿದೆ.
ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕುಮಾರಸ್ವಾಮಿ, ಎಸ್.ಆರ್.ಶ್ರೀನಿವಾಸ್ ಆರೋಪಕ್ಕೆ ಪತಿಕ್ರಿಯಿಸುತ್ತಾ, ಮಾಧ್ಯಮದವರ ಮುಂದೆ ತಮ್ಮ ಕೈಲಿದ್ದ ಕರ್ಚೀಪ್ ಇಟ್ಟು ಇದರಲ್ಲಿ ಗ್ಲೀಸರೀನ್ ಇದೆಯಾ? ಅಥವಾ ಬೇರೆ ಏನಿದೆ ಎಂಬುದನ್ನು ನೀವೇ ನೋಡಿ.. ಎಂದು ಒತ್ತಾಯಿಸಿದರು.
ನಮ್ಮ ಕುಟುಂಬದವರು ಭಾವನಾತ್ಮಕ ಜೀವಿಗಳು. ಭಾವನೆಗಳಿಂದಾಗಿ ಕಣ್ಣೀರು ಬರುತ್ತೆ. ಭಾವನಾತ್ಮಕವಾಗಿ ಕಣ್ಣೀರು ಹರಿದರೂ ಗ್ಲೀಸರೀನ್ ಹಚ್ಚಿ ಕಣ್ಣೀರುಡುತ್ತಾರೆ ಎಂದು ಈ ಹಿಂದೆಯೂ ಆರೋಪ ಮಾಡಿದ್ದರು ಎಂದು ಹೇಳುತ್ತಲೇ ಮತ್ತೆ ಕುಮಾರಸ್ವಾಮಿ ಕಣ್ಣೀರಾದರು.
ಚಿನ್ನ, ಬೆಳ್ಳಿ ದರ ಇಂದು ಯಾವ ನಗರದಲ್ಲಿ ಎಷ್ಟಿದೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ