Latest

‘ಅದೇ ವ್ಯಕ್ತಿ ಮೈತ್ರಿ ಸರ್ಕಾರ ಉರುಳಿಸುವ ವೇಳೆ ಮುಂಬೈಗೆ ಹೋಗಿದ್ದ, ಶಾಸಕರ ಜೊತೆ ಇದ್ದ’

ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳಷ್ಟೇ ಅಲ್ಲ, ಅಧಿಕಾರಿಗಳೂ ಭಾಗಿಯಾಗಿದ್ದಾರೆ

 

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು ಮಾತ್ರವಲ್ಲ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಡ್ರಗ್ಸ್ ಮಾಫಿಯಾ ಬಗ್ಗೆ ಸಮಗ್ರ ತನಿಖೆ ಆಗಬೇಕು. ಇದರಲ್ಲಿ ರಾಜಕಾರಣಗಳು ಹಾಗೂ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಸರ್ಕಾರದಲ್ಲಿರುವವರು ತುಂಬಾ ಜನ ಡ್ರಗ್ಸ್ ದಂಧೆಯಲ್ಲಿದ್ದಾರೆ. ಈ ಬಗ್ಗೆ ಸಮರ್ಪಕ ತನಿಖೆ ಆಗದಿದ್ದರೆ ಪ್ರಕರಣ ಕೋಲ್ಡ್ ಸ್ಟೋರೇಜ್ ಸೇರುತ್ತೆ ಎಂದರು.

ನಾನು ಮೈತ್ರಿ ಸರ್ಕಾರದ ಸಿಎಂ ಆಗಿದ್ದ ವೇಳೆ ಕ್ರಿಕೆಟ್ ಬೆಟ್ಟಿಂಗ್, ಡಾನ್ಸ್ ಬಾರ್ ಗಳ ಮೇಲೆ ಕ್ರಮ ಕೈಗೊಂಡಿದ್ದೆ. ಅಕ್ರಮ ದಂಧೆಗಳನ್ನು ಮುಚ್ಚಬೇಕು ಎಂದು ಸೂಚನೆ ನೀಡಿದ್ದೆ. ನನ್ನ ಆದೇಶದ ಮೇಲೆ ಹಲವು ಪ್ರದೇಶಗಳ ಮೇಲೆ ರೇಡ್ ಆಗಿತ್ತು. ಅದರ ಬೆನ್ನಲ್ಲೇ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ ಶ್ರೀಲಂಕಾಗೆ ಪರಾರಿಯಾಗಿದ್ದ ಎಂದು ಹೇಳಿದರು.

ಅದೇ ವ್ಯಕ್ತಿ ಮೈತ್ರಿ ಸರ್ಕಾರ ಉರುಳಿಸುವ ವೇಳೆ ಮುಂಬೈಗೆ ಹೋಗಿದ್ದ ಶಾಸಕರ ಜೊತೆ ಇದ್ದ. ವಿಧಾನಸೌಧದಲ್ಲಿ ಆ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯ ಫೋಟೋವನ್ನು ಕೂಡ ನಾನು ತೋರಿಸಿದ್ದೆ ಎಂದು ಕಿಡಿಕಾರಿದ್ದಾರೆ.

ಡಾನ್ಸ್ ಬಾರ್, ನೈಟ್ ಬಾರ್ ಗಳಲ್ಲಿ ಡ್ರಗ್ ದಂಧೆಯ ಮೂಲವಿದೆ. ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಬೆಳಗ್ಗೆ 4 ವರಗೆ ಪಾರ್ಟಿ ನಡೆಯುತ್ತಿತ್ತು. ವಿಠ್ಠಲ್ ಮಲ್ಯ ರೋಡ್ ನಲ್ಲಿ ಮೈಕ್ರೋ ಬ್ರೆವರೀಸ್ ಹೊಟೇಲ್ ಹಿಂದೆಯೂ ಪಾರ್ಟಿಗಳು ನಡೆಯುತ್ತಿತ್ತು. ಇಲ್ಲಿ ಬಂಡವಾಳ ಹೂಡಿಕೆ ಮಾಡಿರುವವರು ಯಾರು? ಈ ಬಗ್ಗೆ ಸರ್ಕಾರ ತನಿಖೆ ಮಾಡಲಿ. ಸರ್ಕಾರದಲ್ಲಿ ಇರುವವರು ಡ್ರಗ್ಸ್ ದಂಧೆಯಲ್ಲಿ ತುಂಬಾ ಜನರಿದ್ದಾರೆ. ಪ್ರಕರಣದ ತಾರ್ಕಿಕ ಅಂತ್ಯ ಕಾಣಬೇಕಾದರೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button