Kannada NewsLatestTech

*ವಾಟ್ಸಾಪ್ ಬಳಕೆದಾರರಿಗೆ ಮಹತ್ವದ ಮಾಹಿತಿ: ಇಂದಿನಿಂದ ಹೊಸ ನಿಯಮ ಜಾರಿ*

ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿ ಮೆಸೇಜಿಂಗ್ ಆ್ಯಪ್‌ಗಳ ಬಳಕೆಗೆ ಇಂದಿನಿಂದ ಹೊಸ ಮತ್ತು ಕಠಿಣ ನಿಯಮಗಳು ಜಾರಿಗೆ ಬರುತ್ತಿವೆ. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯು ‘ಟೆಲಿಕಾಂ ಕಾಯ್ದೆ 2023’ರ ಅಡಿಯಲ್ಲಿ ಸಿಮ್ ಬೈಂಡಿಂಗ್ ಎಂಬ ಹೊಸ ನಿಯಮವನ್ನು ಪರಿಚಯಿಸಿದೆ.

Home add -Advt

ಇದರ ಪ್ರಕಾರ, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಖಾತೆಗಳು ಕಾರ್ಯನಿರ್ವಹಿಸಲು ನಿಮ್ಮ ಮೊಬೈಲ್‌ನಲ್ಲಿ ಆ ನಂಬರ್‌ನ ಸಕ್ರಿಯ ಸಿಮ್ ಕಾರ್ಡ್ ಇರುವುದು ಕಡ್ಡಾಯ. ಸಿಮ್ ತೆಗೆದರೆ, ಸ್ಟಾಪ್ ಮಾಡಿದರೆ ಅಥವಾ ನಿಷ್ಕ್ರಿಯಗೊಂಡರೆ ನಿಮ್ಮ ಮೆಸೇಜಿಂಗ್ ಆ್ಯಪ್ ಖಾತೆಯು ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ.

ಇಂದಿನಿಂದ ವಾಟ್ಸ್​ಆ್ಯಪ್ ವೆಬ್ ಮತ್ತು ಡೆಸ್ಕ್‌ಟಾಪ್ ಸೆಷನ್‌ಗಳು ಪ್ರತಿ ಆರು ಗಂಟೆಗಳಿಗೊಮ್ಮೆ ಸ್ವಯಂಚಾಲಿತವಾಗಿ ಲಾಗೌಟ್ ಆಗಲಿವೆ. ಕಚೇರಿ ಕೆಲಸಗಳಿಗೆ ವಾಟ್ಸ್​ಆ್ಯಪ್ ಬಳಸುವವರು ಪ್ರತಿ ಆರು ಗಂಟೆಗೊಮ್ಮೆ ತಮ್ಮ ಫೋನ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ OTP ಪರಿಶೀಲನೆ ಮಾಡಬೇಕಾಗುತ್ತದೆ. ಈ ನಿಯಮಗಳಿಂದ ಸಾಮಾನ್ಯ ಬಳಕೆದಾರರು ಆತಂಕಪಡಬೇಕಿಲ್ಲ, ಆದರೆ ತಮ್ಮ ಪ್ರಾಥಮಿಕ ಮೊಬೈಲ್‌ನಲ್ಲಿ ಸಿಮ್ ಕಾರ್ಡ್ ಇರಿಸಿಕೊಳ್ಳುವುದು ಮತ್ತು ಆ್ಯಪ್‌ಗಳನ್ನು ಅಪ್ಡೇಟ್ ಮಾಡುವುದು ಅನಿವಾರ್ಯ.

ಸೈಬರ್ ಭದ್ರತೆಯನ್ನು ಹೆಚ್ಚಿಸಲು ಮತ್ತು ಆನ್‌ಲೈನ್ ವಂಚನೆಗಳನ್ನು ತಡೆಯಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಯಮದಿಂದ, ಕದ್ದ OTP ಗಳನ್ನು ಬಳಸಿ ವಂಚನೆ ನಡೆಸುತ್ತಿದ್ದ ಸೈಬರ್ ಖದೀಮರಿಗೆ ಕಡಿವಾಣ ಬೀಳಲಿದೆ.


Related Articles

Back to top button