Latest

*ಕರೆಂಟ್ ಬಿಲ್ ಕಟ್ಟಬೇಡಿ ಎಂದು ಕರೆ ನೀಡಿದ ಮಾಜಿ ಸಿಎಂ HDK*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚುನಾವಣೆಗೂ ಮುನ್ನ ಕಾಂಗ್ರೆಸ್ ನಾಯಕರು ನಿಮಗೂ ಫ್ರೀ, ನನಗೂ ಫ್ರೀ ಎಂದು ಹೇಳಿದರು. ಈಗ ಗ್ಯಾರಂಟಿ ಯೋಜನೆ ಜಾರಿಗೆ ವಿಳಂಬ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಕುತಂತ್ರ ರಾಜಕಾರಣ ನಡೆಸಿ ರಾಜ್ಯದ ಜನರನ್ನು ವಂಚಿಸುತ್ತಿದೆ. ಗ್ಯಾರಂಟಿ ಹೆಸರಲ್ಲಿ ಜನರನ್ನು ಮೋಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ. ಹಾಗಾಗಿ ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟಬೇಡಿ ಎಂದು ಕರೆ ನೀಡಿದರು.

ಮತದಾನಕ್ಕೂ ಮುನ್ನ ಕಾಂಗ್ರೆಸ್ ನಾಯಕರು ಕೂಪನ್ ಕಾರ್ಡ್ ಗಳನ್ನು ಹಂಚಿದ್ದಾರೆ. ಈ ಮೂಲಕ ಅಮಾಯಕ ಜನರಿಗೆ 5 ಸಾವಿರ ಮೌಲ್ಯದ ಗಿಫ್ಟ್ ಕೊಡ್ತೀವಿ ಎಂದು ಕೂಪನ್ ಹಂಚಿ ವಂಚಿಸಿದ್ದಾರೆ. 30 ಕೋಟಿ ಗಿಫ್ಟ್ ನ್ನು ಕಾಂಗ್ರೆಸ್ ಈಗ ಜನರಿಗೆ ನೀಡಬೇಕು ಎಂದು ಆಗ್ರಹಿಸಿದರು.

Home add -Advt

ರಾಜ್ಯದ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕರು ಕೂಪನ್ ಕಾರ್ಡ್ ಹಂಚಿದ್ದಾರೆ. ಆರ್.ಆರ್.ನಗರದಲ್ಲಿ ಕುಸುಮಾ, ಕುಣಿಗಲ್ ನಲ್ಲಿ ರಂಗನಾಥ್, ರಾಮನಗರದಲ್ಲಿ ಇಕ್ಬಾಲ್, ಮಾಗಡಿ ಕ್ಷೇತ್ರದಲ್ಲಿ ಬಾಲಕೃಷ್ಣ ಕೂಪನ್ ಹಂಚಿದ್ದಾರೆ. ಇಂತಹ ಅಕ್ರಮ ಕೂಪನ್ ಹಂಚಿಕೆಯಿಂದಾಗಿ ನಮ್ಮ ಪಕ್ಷಕ್ಕೆ ಸೋಲಾಗಿದೆ. ಕಾಂಗ್ರೆಸ್ ಕೂಪನ್ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

https://pragati.taskdun.com/r-ahokpressmeetsiddaramaiahd-k-shivakumar/

Related Articles

Back to top button