Politics

*ಮುಡಾ ಹಗರಣದಲ್ಲಿ 15 ಸೈಟು ಡಿನೋಟಿಫೈ ಮಾಡಿ ಎಂದು ಅರ್ಜಿ ಕೊಟ್ಟಿದ್ದೆ ಸಿಎಂ ಭಾವಮೈದ!*

ಅರ್ಜಿ ಮೇಲೆ ಇಂಗ್ಲಿಷ್ ನಲ್ಲಿ DCM ಎಂದು ಬರೆದಿದ್ದಾರೆ, FSIL ವರದಿ ಏನು ಹೇಳುತ್ತೆ ಎಂದು ಲೋಕಾಯುಕ್ತ ವರದಿ ಪ್ರದರ್ಶಿದ HDK

ಪ್ರಗತಿವಾಹಿನಿ ಸುದ್ದಿ: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರ ಶಾಮೀಲಾಗಿದ್ದಾರೆ ಎಂದು ಪುನರುಚ್ಚರಿಸಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು; ಸಿಎಂ ಭಾವಮೈದ ಹದಿನೈದು ನಿವೇಶನಗಳ ಡಿನೋಟಿಫೈ ಮಾಡಲು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಸಹಿಯನ್ನು ಪೋರ್ಜರಿ ಮಾಡಲಾಗಿತ್ತು ಎಂದು ಆರೋಪಿಸಿದರು.

ನಾನು ಸತ್ಯವಂತ, ಸತ್ಯ ಹರಿಶ್ಚಂದ್ರ, ಸತ್ಯಮೆಯ ಜಯತೇ ಎಂದು ಹೇಳುವ ಆಸಾಮಿಯ ಚರಿತ್ರೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖ ಆಗಿದೆ. ಆಸಕ್ತರು ಈ ಮಹಾನ್ ಗ್ರಂಥವನ್ನು ಓದಿ ಸತ್ಯವನ್ನು ತಿಳಿದುಕೊಳ್ಳಬಹುದು ಎಂದು ಕೇಂದ್ರ ಸಚಿವರು ತಿರುಗೇಟು ಕೊಟ್ಟರು.

ಆಗ ಸಿದ್ಧರಾಮಯ್ಯ ಉಪ ಮುಖ್ಯಮಂತ್ರಿ ಆಗಿದ್ದರು. ಬಚ್ಚೇಗೌಡರು ನಗರಾಭಿವೃದ್ಧಿ ಸಚಿವರಾಗಿದ್ದರು. ಹದಿನೈದು ನಿವೇಶನ ಡಿನೋಟಿಫೈ ಮಾಡಿ ಎಂದು ಅವರ ಭಾವಮೈದ ಬಚ್ಚೇಗೌಡರಿಗೆ ಅರ್ಜಿ ಸಲ್ಲಿಸಿದರು. ಆ ಭಾವಮೈದ ಎನ್ನುವ ಆಸಾಮಿ ಸಹಿಯನ್ನೇ ನಕಲಿ ಮಾಡಿದ್ದಾನೆ ಎಂದು ವರದಿಯಲ್ಲಿ ಇದೆ. ಅಲ್ಲದೆ ಅರ್ಜಿಯ ಮೇಲೆ ಇಂಗ್ಲಿಷ್ ನಲ್ಲಿ DCM ಎಂದು ಬರೆಯಲಾಗಿದೆ. ಆ ಬಗ್ಗೆ ಬಂದಿರುವ fsil ವರದಿಯನ್ನು ಲೋಕಾಯುಕ್ತ ವರದಿಯಲ್ಲಿ ಅಡಕವಾಗಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಲೋಕಾಯುಕ್ತ ವರದಿಯನ್ನು ತೋರಿಸಿದರು ಕೇಂದ್ರ ಸಚಿವರು.

Home add -Advt

ನಾನು ಸಾಚಾ, ಸತ್ಯವಂತ ಹೇಳಿ ಜನರನ್ನು ದಾರಿ ತಪ್ಪಿಸುತ್ತಿರುವ ಸಿಎಂ ಅಸಲಿ ಮುಖ ಲೋಕಾಯುಕ್ತ ವರದಿಯಲ್ಲಿ ಇದೆ. ಈಗ ಅವರು ಹಗರಣದಿಂದ ಪಾರಾಗಲು ಯಾವ ಮಾರ್ಗ ಹಿಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.

Related Articles

Back to top button