Latest

ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರ; ವಿವಾದ ಸೃಷ್ಟಿಸಿದ ಕುಮಾರಸ್ವಾಮಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದವರನ್ನು ಪ್ರತ್ಯೇಕವಾಗಿ ಗುರುತಿಸಿ, ಅವರ ಮನೆಗಳಿಗೆ ಮಾರ್ಕ್ ಮಾಡುವ ಮೂಲಕ ಆರ್ ಎಸ್ ಎಸ್ ಜರ್ಮನಿಯ ಅಡಾಲ್ಫ್ ಹಿಟ್ಲರನ ನಾಜಿ ಪಡೆಯಂತೆ ಕ್ರೂರವಾಗಿ ವರ್ತಿಸುತ್ತಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್. ಡಿ.ಕುಮಾರಸ್ವಾಮಿ ವಿವಾದ ಸೃಷ್ಟಿಸಿದ್ದಾರೆ.

ದೇಣಿಗೆ ನೀಡದವರ ಮನೆಗಳಿಗೆ ಪ್ರತ್ಯೇಕ ಗುರುತು ಹಾಕಲಾಗುತ್ತಿದೆ. ಈ ಮೂಲಕ ಅರ್ ಎಸ್ ಎಸ್ ಜರ್ಮನಿಯ ನಾಜಿಗಳು ಅನುಸರಿಸುತ್ತಿರುವ ನೀತಿ ಅನುಸರಿಸುತ್ತಿದೆ. ಜರ್ಮನಿಯ ನಾಜಿ ಸೇನೆ ರಚನೆಯಾದಾಗಲೇ ಆರ್ ಎಸ್ ಎಸ್ ಸಹ ಆರಂಭವಾಗಿದೆ. ನಾಜಿಗಳಂತೆಯೇ ಆರ್ ಎಸ್ ಎಸ್ ದೇಶದಲ್ಲಿ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೆ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಒಟ್ಟಾರೆ ಮಾಜಿ ಸಿಎಂ ಕುಮಾರಸ್ವಾಮಿಯವರ ಹೇಳಿಕೆ ಈಗ ರಾಜ್ಯಾದ್ಯಂತ ಹೊಸ ವಿವಾದವನ್ನು ಸೃಷ್ಟಿ ಮಾಡಿದೆ.

 

Home add -Advt

Related Articles

Back to top button