ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇಶದ ಜನತೆ 5ನೇ ತಾರೀಖು ಮೇಣದಬತ್ತಿ ಹಚ್ಚಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಈಗ ಮೇಣದಬತ್ತಿ ಎಲ್ಲಿಂದ ತರೋದು ಎಲ್ಲಾ ಕಡೆ ಲಾಕ್ ಡೌನ್ ಆಗಿದೆ. ಮೇಣದಬತ್ತಿ ತರೋಕೆ ಮನೆಯಿಂದ ಹೊರಗೆ ಹೋದ್ರೆ ಲಾಠಿ ಏಟು ಬೀಳುತ್ತವೆ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಶೇ.30 ರಷ್ಟು ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಮೋದಿಯವರು ಹೇಳ್ತಾರೆ ದೀಪ ಹಚ್ಚಿ, ಮೇಣದ ಬತ್ತಿ ಹಚ್ಚಿ ಅಂತಾ. ಒಂದು ಮೇಣದ ಬತ್ತಿಗೆ ಹತ್ತು ರೂಪಾಯಿ ಇದೆ. ಮೇಣದ ಬತ್ತಿಗೆ ಜನ ಎಲ್ಲಿಂದ ಹಣ ತರ್ತಾರೆ ಎಂದು ಪ್ರಶ್ನಿಸಿದರು.
ಇನ್ನು ಮೋದಿಯವರು ಮನೆಯಲ್ಲೇ ಯೋಗ ಮಾಡಿ ಅಂತ ಹೇಳುತ್ತಾರೆ. ಹಳ್ಳಿಗಳಲ್ಲಿ ರೈತರು ಎಲ್ಲಿ ಯೋಗ ಮಾಡ್ತಾರೆ? ಹಾಸನದಲ್ಲಿ ಅನ್ನ ಸಿಗುತ್ತಿಲ್ಲಾ. ಆದರೆ ಎಣ್ಣೆ ವ್ಯಾಪಾರ ಜೋರಾಗಿದೆ. ಲಾರಿಗಟ್ಟಲೇ ಎಣ್ಣೆಯನ್ನು ಬೇರೆ ಕಡೆ ಸಾಗಿಸುತ್ತಿದ್ದಾರೆ. ಜಿಲ್ಲಾಧಿಕಾರಿಗೆ ಕೇಳಿದರೆ ಎಣ್ಣೆ ಅಂಗಡಿ ತೆರೆದಿರೋದು ನನ್ನ ವ್ಯಾಪ್ತಿಗೆ ಬರುವುದಿಲ್ಲ ಅಂತಾರೆ ಎಂದು ಕಿಡಿಕಾರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ