ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ ಮನಬಂದಂತೆ ಮಾತನಾಡಿದ್ದಾರೆ.
ಯಡಿಯೂರಪ್ಪ ಅವರಿಗೆ ವಯಸ್ಸಾಗಿ, ಮಾನಸಿಕ ಸ್ಥಿತಿ ಸರಿ ಇಲ್ಲ, ಅವರಿಗೆ ಅಧಿಕಾರ ನಡೆಸುವ ಶಕ್ತಿ, ದೃಷ್ಟಿಕೋನ ಇಲ್ಲ. ಕುಟುಂಬದ ಹಸ್ತಕ್ಷೇಪ ಅತಿಯಾಗಿದೆ, ಭ್ರಷ್ಟಾಚಾರ ಮಿತಿಮೀರಿದೆ ಎಂದೆಲ್ಲ ವಿಶ್ವನಾಥ ಮಾತನಾಡಿದ್ದಾರೆ.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಭೇಟಿ ನಂತರ ಅವರು ಮಾತನಾಡಿದರು. ಕಾಮನ್ ಸೆನ್ಸ್ ಇರುವ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತಂದು ಕೂಡ್ರಿಸಬೇಕು ಎಂದರು. ಎಲ್ಲವನ್ನೂ ಅರುಣ ಸಿಂಗ್ ಗಮನಕ್ಕೆ ತಂದಿದ್ದೇನೆ ಎಂದು ಅವರು ಹೇಳಿದರು.
ತಿರುಗೇಟು
ಇದಕ್ಕೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ನಿಮಗೆಷ್ಟು ವಯಸ್ಸು? ನಿಮ್ಮನ್ನು ವಿಧಾನ ಪರಿಷತ್ ಸದಸ್ಯನನ್ನಾಗಿಸಿದ್ದೇ ಹೇಚ್ಚು ಎಂದಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದು ವಿಧಾನಪರಿಷತ್ ಸದಸ್ಯರೇ ಹೊರತು ನಿಮ್ಮಂತ ವಿಧಾನಪರಿಷತ್ ಸದಸ್ಯರಲ್ಲ. ವಿರೋಧ ಪಕ್ಷದವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಸ್ವಂತ ಪಕ್ಷದ ಬಗ್ಗೆ ಅವರು ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಎಸ್.ಆರ್.ವಿಶ್ವನಾಥ ಕೂಡ ಎಚ್ ವಿಶ್ವನಾಥ್ ವಿರುದ್ಧ ಕಿಡಿಕಾರಿದ್ದಾರೆ. ಅವರು ಅರೆ ಹುಚ್ಚರಾಗಿದ್ದಾರೆ. ಅವರ ಮಾನಸಿಕ ಸ್ಥಿತಿಯ ಬಗ್ಗೆ ತಪಾಸಣೆ ಮಾಡಬೇಕು ಎಂದಿದ್ದಾರೆ. ತಿಂದ ಮನೆಗೆ ದ್ರೋಹ ಬಗೆಯುವುದೇ ಅವರ ಗುಣ. ಯಾವಾಗ ಯಾರ ಪರವಾಗಿರುತ್ತಾರೋ ಗೊತ್ತಿಲ್ಲ. ರೋಡಲ್ಲಿ ಹಲುಬುತ್ತ ಸಾಗುವ ಅರೆಹುಚ್ಚರಂತಾಗಿದ್ದಾರೆ ಎಂದು ಹೇಳಿದ್ದಾರೆ.
ಮೊದಲು ತೀರ್ಪು, ನಂತರ ವಿಚಾರಣೆ ಇದು ಅರುಣ ಸಿಂಗ್ ಸ್ಟೈಲ್!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ