ಸಚಿವ ಸ್ಥಾನಕ್ಕಾಗಿ ಸಿಎಂ ಭೇಟಿಯಾಗಿಲ್ಲ ಎಂದ ವಿಶ್ವನಾಥ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಈ ವರೆಗೆ ನಾನು ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿಲ್ಲ. ಆದರೆ ನಾವು ಸಿಎಂ ಯಡಿಯೂರಪ್ಪ ಅವರನ್ನು ನಂಬಿದ್ದೇವೆ. ನಾವು 17 ಜನರೂ ಸಚಿವರಾಗಲು ಅರ್ಹರು ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನದ ಉದ್ದೇಶದಿಂದ ಸಿಎಂ ಭೇಟಿಯಾಗಿಲ್ಲ. ನಾವು ಸಿಎಂ ಅವರನ್ನು ನಂಬಿದ್ದೇವೆ. ಸಚಿವ ಸಂಪುಟ ವಿಸ್ತರಣೆ ಅವರಿಗೆ ಬಿಟ್ಟ ವಿಚಾರ. ನನಗೆ ಗೊತ್ತಿರುವುದು ಸಿಎಂ ಯಡಿಯೂರಪ್ಪ ಮಾತ್ರ. ದೆಹಲಿಯಲ್ಲಿ ಹೈಕಮಾಂಡ್ ಯಾರೂ ಗೊತ್ತಿಲ್ಲ ಎಂದರು.

Home add -Advt

ಇನ್ನು ಗೆದ್ದವರಿಗೆ ಮಾತ್ರ ಸಚಿವ ಸ್ಥಾನ ಎಂದು ಸಂಸದಾ ಶ್ರೀನಿವಾಸ್ ಪ್ರಸಾದ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಶ್ವನಾಥ್, ಕೆಲವರು ಸೋತವರಿಗೆ ಮಂತ್ರಿ ಸ್ಥಾನ ಇಲ್ಲ ಎಂದು ಹೇಳುತ್ತಿದ್ದಾರೆ. ಹೀಗೆ ಮಾತನಾಡುವವರು ಕೋರ್ಟ್ ತೀರ್ಪು ಸರಿಯಾಗಿ ಓದಿಲ್ಲ. ಓದಿದ್ದರೆ ಗೊತ್ತಾಗುತ್ತಿತ್ತು. ನಾನು ಶ್ರೀನಿವಾಸ್ ಪ್ರಸಾದ್ ಅವರ ಜತೆ ಚರ್ಚಿಸಿದ್ದೇನೆ. ಕೋರ್ಟ್ ತೀರ್ಪಿನ ಪ್ರತಿಯನ್ನೂ ಕೊಟ್ಟಿದ್ದೇನೆ. ನಾವು 17 ಜನರೂ ಸಚಿವರಾಗಲು ಅರ್ಹರು. ಆದರೆ ಸಚಿವ ಸ್ಥಾನ ನಿಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದು ಹೇಳಿದರು.

Related Articles

Back to top button