Latest

ಭಯೋತ್ಪಾದಕ ಚಟುವಟಿಕೆಗಳಿಗೆ ಹಲಾಲ್ ಹಣ ಹೋಗುತ್ತೆ; ಪ್ರಶಾಂತ್ ಸಂಬರಗಿ ಕಿಡಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಬಾಯ್ಕಾಟ್ ಅಭಿಯಾನ ತೀವ್ರಗೊಂಡಿದ್ದು, ಹಲಾಲ್ ನಿಷೇಧಕ್ಕೆ ಒತ್ತಾಯಿಸಿ ಜಟ್ಕಾ ಮೀಟ್ ಅಭಿಯಾನ ನಡೆಸಿದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ, ಹಲಾಲ್ ಮಾಡಿದ ಹಣ ಉಗ್ರರಿಗೆ ಹೋಗುತ್ತಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರಗಿ, ಭಯೋತ್ಪಾದಕ ಚಟುವಟಿಕೆಗೆ ಹಲಾಲ್ ಹಣ ಹೋಗುತ್ತಿದೆ. ಹಲಾಲ್ ಹಿಂದೂಗಳ ಆಹಾರವಲ್ಲ, ಹಲಾಲ್ ನಡೆಸಲು ಸರ್ಕಾರಿ ಸರ್ಟಿಫಿಕೇಟ್ ಗಳು ಬೇಕಿಲ್ಲ ಎಂದರು.

15 ವರ್ಷಗಳಿಂದ ನಮ್ಮ ಮೇಲೆ ಹಲಾಲ್ ಹೇರಿಕೆ ಮಾಡುತ್ತಿದ್ದಾರೆ. ಹಲಾಲ್ ಇರುವ ಫುಡ್ ಪ್ರಾಡೆಕ್ಟ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಹಲಾಲ್ ಹೆಸರಲ್ಲಿ ಶಾವಿಗೆ ಕೂಡ ಮಾರಾಟವಾಗುತ್ತಿದೆ. 300 ಹಲಾಲ್ ಸರ್ಟಿಫಿಕೆಟ್ ಕಂಪನಿಗಳಿವೆ. ಇವೆಲ್ಲವೂ ಕಾನೂನು ಬಾಹಿರ ಸರ್ಟಿಫಿಕೆಟ್ ಗಳು. ಅನೇಕ ಮುಸ್ಲಿಂ ಯುವಕರಿಗೆ ಇದೊಂದು ಉದ್ಯಮವಾಗಿದೆ. ಅವರು ದೇವರಿಗೆ ಪ್ರಾರ್ಥನೆ ಮಾಡಿ ಬಳಿಕ ಹಿಂದೂಗಳಿಗೆ ಅರ್ಪಣೆ ಮಾಡ್ತಾರೆ. ಹಲಾಲ್ ದೇಶಕ್ಕೆ ಮಾರಕವಾಗಿದೆ. ಇದು ಮುಸ್ಲಿಂ ಸಂಸ್ಕೃತಿ ಹೊರತು ನಮ್ಮ ಸಂಸ್ಕೃತಿಯಲ್ಲ ಎಂದು ಕಿಡಿಕಾರಿದರು.

ಹಲಾಲ್ ನಿಷೇಧಿಸುವಂತೆ ನಾವು ಎರಡು ವರ್ಷಗಳ ಹಿಂದೆಯೇ ಅಭಿಯಾನ ಆರಂಭಿಸಿದ್ದೆವು. ಹಲಾಲ್ ಎಲ್ಲೆಲ್ಲಿಗೆ ಹೋಗುತ್ತದೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಲ್ಲಾ ಹಲಾಲ್ ಮಾದಿದರೆ ಮೆಕ್ಕಾ ಕಡೆ ಮುಖ ಮಾಡಿ ಕೋಳಿ ಕತ್ತರಿಸುತ್ತಾನೆ. ಹಲಾಲ್ ಗೆ ಪ್ರತಿಯಾಗಿ ಹಿಂದೂಗಳಿಂದ ಜಟ್ಕಾ ಮೀಟ್ ಆರಂಭವಾಗಬೇಕು ಎಂದು ಹೇಳಿದರು.
ಯಾವುದಕ್ಕೆ ಪ್ರತಿಕ್ರಿಯ ಕೊಡಬೇಕು, ಯಾವುದಕ್ಕೆ ಕೊಡಬಾರದು ಗೊತ್ತಿದೆ ಎಂದ ಮುಖ್ಯಮಂತ್ರಿ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button