ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯರ ಫೋಟೋ ಪಡೆದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಮಿಳುನಾಡಿನ ಹೊಸೂರು ಬಳಿಯ ಗಣೇಶ್ ಎಂದು ಗುರುತಿಸಲಾಗಿದೆ. ಆನ್ ಲೈನ್ ನಲ್ಲಿ ಉತ್ತಮ ಸಂಬಳದ ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯರಿಗೆ ನಂಬಿಸಿ ಫೋಟೋ ಪಡೆದಿದ್ದ ಆರೋಪಿ ಕೆಲ ತಿಂಗಳ ಕಾಲ ಆನ್ ಲೈನ್ ಚಾಟಿಂಗ್ ಆಪ್ ನಲ್ಲಿ ಕೆಲಸವನ್ನು ನೀಡುತ್ತಿದ್ದ. ಒಂದಿಷ್ಟು ಹಣವನ್ನು ಸಂಬಳ ಎಂದು ಕೊಟ್ಟು ನಂಬಿಕೆ ಗಿಟ್ಟಿಸುತ್ತಿದ್ದ.
ಬಳಿಕ ಯುವತಿಯರಿಂದ ಬೇಕಾದ ಫೋಟೊಗಳನ್ನು ಪಡೆದು ಫೋಟೋ ಮೂಲಕವೇ ಬ್ಲ್ಯಾಕ್ ಮೇಲ್ ಮಾಡಿ ಲಕ್ಷ ಲಕ್ಷ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ.
ಈತನಿಂದ ವಂಚನೆಗೊಳಗಾದ ಯುವತಿಯೊಬ್ಬರು ಕಾಡುಗೋಡಿ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿದ್ದಾರೆ.
ಭಯೋತ್ಪಾದಕ ಚಟುವಟಿಕೆಗಳಿಗೆ ಹಲಾಲ್ ಹಣ ಹೋಗುತ್ತೆ; ಪ್ರಶಾಂತ್ ಸಂಬರಗಿ ಕಿಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ