Kannada NewsKarnataka NewsLatest

ಅರೆಬರೆ ಬೆಂದ ಅನ್ನ, ತರಕಾರಿ ಇಲ್ಲದ ಸಾಂಬಾರ; ಮುಗ್ದ ಮಕ್ಕಳ ಬಿಸಿ ಊಟದಲ್ಲೂ ಕಳ್ಳಾಟ : ಸಮೃದ್ಧಿ ಸೇವಾ ಸಂಸ್ಥೆಗೆ ನೋಟೀಸ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಗ್ದ ಮಕ್ಕಳಿಗೆ ನೀಡುವ ಬಿಸಿಯೂಟದಲ್ಲಿ ಕಳ್ಳಾಟ ಆಡುತ್ತಿರುವ ಆರೋಪದ ಮೇಲೆ ಬೆಳಗಾವಿಯ ಸಮೃದ್ಧಿ ಸೇವಾ ಸಂಸ್ಥೆಗೆ ತಾಲೂಕು ಪಂಚಾಯಿತಿ ನೋಟೀಸ್ ಜಾರಿಗೊಳಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಮಧ್ಯಾಹ್ನ ಉಪಹಾರ ಯೋಜನೆಯು ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಯೋಜನೆ ಜಾರಿಗೆ ತರಲಾಗಿದೆ. ಆದರೆ ತಮ್ಮ ಸಂಸ್ಥೆ ಬಿಸಿಯೂಟದಲ್ಲಿ ಸರ್ಕಾರದ ಮೇನು ಪ್ರಕಾರ ಹಾಗೂ ನಿಯಮಗಳಂತೆ ತರಕಾರಿ, ಬೇಳೆ ಬಳಸುತ್ತಿಲ್ಲ, ಅಕ್ಕಿಯನ್ನು ಸ್ವಚ್ಛಗೊಳಿಸದೇ ಅನ್ನ ತಯಾರಿಸಲಾಗುತ್ತಿದೆ. ಹಾಗೂ ಒಡಂಬಡಿಕೆಯ ಷರತ್ತುಗಳ ಪ್ರಕಾರ ಬಿಸಿಯೂಟವನ್ನು ಕಂಟೇನರ್ ಬಳಸಿ ಸರಬರಾಜು ಮಾಡಬೇಕಾಗಿರುತ್ತದೆ. ಆದರೆ, ತಾವು ಕೆಲವು ಶಾಲೆಗಳಿಗೆ ಕಂಟೆನರ್ ಬಳಸದೇ ಬಿಸಿಯೂಟ ಸರಬರಾಜು ಮಾಡುತ್ತಿರುವಿರಿ ಎಂದು ನೋಟೀಸ್ ನಲ್ಲಿ ಗಂಭೀರ ಅಂಶಗಳನ್ನು ಉಲ್ಲೇಖಿಸಲಾಗಿದೆ.

 ತಮ್ಮ ಸಂಸ್ಥೆಯಿಂದ ಬೆಳಗಾವಿ ನಗರ ವಲಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟ ಹಾಗೂ ಹಾಲನ್ನು ಸರಬರಾಜು ಮಾಡಲಾಗುತ್ತಿದ್ದು, ಉಲ್ಲೇಖ (1 & 2 ) ರ ಪತ್ರದಲ್ಲಿ ಬಿಸಿಯೂಟಕ್ಕಾಗಿ ಬಳಸುತ್ತಿರುವ ಎಲ್ಲ ಆಹಾರ ಧಾನ್ಯಗಳನ್ನು ಸ್ವಚ್ಛಗೊಳಿಸಿ ಸರ್ಕಾರದ ನಿಯಮದ ಪ್ರಕಾರ ಸಾಂಬಾರಿನಲ್ಲಿ ತರಕಾರಿಗಳನ್ನು ಬಳಸಿ ಶಾಲೆಗಳಿಗೆ ಉತ್ತಮ ಗುಣಮಟ್ಟದ ಬಿಸಿಯೂಟ ಹಾಗೂ ಹಾಲನ್ನು ಸರಬರಾಜು ಮಾಡಲು ತಿಳಿಸಿ ಈ ಕಛೇರಿಗೆ ವರದಿ ನೀಡಲು ತಿಳಿಸಲಾಗಿತ್ತು. ಆದರೆ ತಮ್ಮಿಂದ ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿರುವುದಿಲ್ಲ.
ದಿನಾಂಕ : 5-7-2022 ರಂದು  ಶಾಸಕರಾದ  ಅಭಯ ಪಾಟೀಲ್‌ ಇವರು ಎಂ.ಎಚ್.ಪಿ.ಎಸ್ ನಂ 19 ಅಳವನಗಲ್ಲಿ ಶಾಹಪೂರ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳ ಜೊತೆಗೆ ಮಧ್ಯಾಹ್ನ ಬಿಸಿಯೂಟ ಸೇವಿಸಿದರು. ಈ ವೇಳೆ ಶಾಲಾ ಮಕ್ಕಳಿಗೆ ಸರಿಯಾಗಿ ಬೇಯಿಸದ ಅನ್ನ ನೀಡಿರುವದು ಮತ್ತು ಸರಿಯಾಗಿ ತರಕಾರಿಗಳನ್ನು ಬಳಕೆ ಮಾಡದೇ ಇರುವುದು ಕಂಡು ಬಂದಿದೆ. ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗಾವಿ ನಗರವಲಯ ಬೆಳಗಾವಿ ಮತ್ತು ಸಹಾಯಕ ನಿರ್ದೇಶಕರು ಅಕ್ಷರದಾಸೋಹ ತಾಲೂಕ ಪಂಚಾಯತ ಬೆಳಗಾವಿ ಇವರನ್ನು ಕರೆಯಿಸಿ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡಿದರೆ ಸಂಬಂಧಿಸಿದ ಸಂಸ್ಥೆಯವರ ಮೇಲೆ ಕಠಿಣ ಕ್ರಮ ಕೈಕೊಳಬೇಕು ಎಂದು ಎಚ್ಚರಿಸಿದ್ದಾರೆ.
ಸರ್ಕಾರದ ನಿಯಮದಂತೆ ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತದೆ. ಆದರೆ ಸದರಿ ಸಂಸ್ಥೆಯವರು ಮಧ್ಯಾಹ್ನದ ಬಿಸಿಯೂಟದಲ್ಲಿ ಸರ್ಕಾರದ ಮೇನು ಪ್ರಕಾರ ಹಾಗೂ ನಿಯಮಗಳಂತೆ ತರಕಾರಿ, ಬೇಳೆ ಬಳಸುತ್ತಿಲ್ಲ, ಅಕ್ಕಿಯನ್ನು ಸ್ವಚ್ಛಗೊಳಿಸದೇ ಅನ್ನ ತಯಾರಿಸಲಾಗುತ್ತಿದೆ. ಹಾಗೂ ಒಡಂಬಡಿಕೆಯ ಷರತ್ತುಗಳ ಪ್ರಕಾರ ಬಿಸಿಯೂಟವನ್ನು ಕಂಟೇನರ್ ಬಳಸಿ ಸರಭರಾಜು ಮಾಡಬೇಕಾಗಿರುತ್ತದೆ. ಆದರೆ, ತಾವು ಕೆಲವು ಶಾಲೆಗಳಿಗೆ ಕಂಟೆನರ್ ಬಳಸದೇ ಬಿಸಿಯೂಟ ಸರಬರಾಜು ಮಾಡುತ್ತಿರುವಿರಿ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಮಧ್ಯಾಹ್ನ ಉಪಹಾರ ಯೋಜನೆಯು ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಹಾಗೂ ಯಾವುದೇ ರೀತಿಯ ಮಕ್ಕಳಿಗೆ ಅನಾಹುತ ಸಂಭವಿಸಬಾರದೆಂಬ ದೃಷ್ಟಿಯಿಂದ ತಮ್ಮ ಸಂಸ್ಥೆಗೆ ಹಲವಾರು ಸಲ ಸಂದರ್ಶನ ನೀಡಿದಾಗ ಹಾಗೂ ಪತ್ರಗಳ ಮೂಲಕ ಸೂಚನೆ ನೀಡಲಾಗಿದೆ, ಆದರೆ ತಾವು ಸದರಿ ವಿಷಯಕ್ಕೆ ನಿರ್ಲಕ್ಷತನ ತೋರಿ ಮೇಲಾಧಿಕಾರಿಗಳ ಆದೇಶಗಳನ್ನು ಉಲ್ಲಂಘಿಸುತ್ತಿರುವದು ಕಂಡು ಬಂದಿದೆ. ಕಾರಣ ಈ ಕುರಿತು ತಮ್ಮ ಸಂಸ್ಥೆಯ ಮೇಲೆ ಶಿಸ್ತು ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ಏಕೆ ಶಿಫಾರಸು ಮಾಡಬಾರದೆಂಬುವದರ ಬಗ್ಗೆ ತಮ್ಮ ಲಿಖಿತ ಹೇಳಿಕೆಯನ್ನು ಈ ಪತ್ರ ತಲುಪಿದ ಮೂರು ದಿನದೊಳಗಾಗಿ ಖುದ್ದಾಗಿ ಈ ಕಳಗೆ ಸಹಿ ಮಾಡಿದವರಿಗೆ ಸಲ್ಲಿಸಲು ತಿಳಿಸಿದೆ. ತಪ್ಪಿದಲ್ಲಿ ತಮ್ಮನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವದು ಎಂದು ಎಚ್ಚರಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button