ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಅರ್ಧ ಭಾಗವನ್ನು ಲಾಕ್ ಡೌನ್ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ, ನಿಪ್ಪಾಣಿ ತಾಲೂಕುಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇಂದು ರಾತ್ರಿ 8 ಗಂಟೆಯಿಂದ ಲಾಕ್ಡೌನ್ ಜಾರಿಯಾಗಿಲಿದ್ದು, 22ನೇ ತಾರೀಖಿನ ಬೆಳಗ್ಗೆ 5 ಗಂಟೆಯವರೆಗೆ ಅಂದರೆ 7 ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ಬೈಕ್ ಮೆಕಾನಿಕ್ ಸಾವು
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ಬೈಕ್ ಮೆಕಾನಿಕ್ ಕೊರೋನದಿಂದ ಸಾವನ್ನಪ್ಪಿದ್ದಾನೆ.
ಕಳೆದ ೧೦ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ೨೭ ವರ್ಷದ ಯುವಕ ಸಾವಿಗೀಡಾಗಿದ್ದು, ಯುವಕ ನ ಮನೆಯ ಸುತ್ತ ಸೀಲ್ ಡೌನ್ ಮಾಡಲಾಗಿದೆ.
ರವಿವಾರ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ಯುವಕನನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಗಿನ ಜಾವ ಅಸು ನೀಗಿದ್ದಾನೆ. ಅವನ ಬಳಿ ಬೈಕ್ ರಿಪೇರಿ ಮಾಡಿಸಿಕೊಂಡವರಿಗೂ ಈಗ ಆತಂಕ ಶುರುವಾಗಿದೆ.
ಚಿಂಚಲಿಯ ಮನೆಯ ಸುತ್ತಮುತ್ತ ಹಾಗೂ ಗ್ಯಾರೇಜ್ ಸಹ ಸೀಲ್ ಡೌನ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ