Latest

ಹಂಪಿ ಬೈ ನೈಟ್ ವರ್ಣರಂಜಿತ ದೀಪಗಳಿಗೆ ಮರುಚಾಲನೆ

ಪ್ರಗತಿವಾಹಿನಿ ಸುದ್ದಿ; ಹಂಪಿ: ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಹಂಪಿ ಬೈ ನೈಟ್ ಕಾರ್ಯಕ್ರಮವನ್ನು ಮತ್ತೆ ಆರಂಭಿಸಲು ವಿಜಯನಗರ ಜಿಲ್ಲಾಡಳಿತ ನಿರ್ಧರಿಸಿದೆ.

ವಿಶ್ವ ಪಾರಂಪರಿಕ ಕೇಂದ್ರಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಲಿದ್ದಾರೆ.

ಹಂಪಿ ಬೈ ನೈಟ್ ಕಾರ್ಯಕ್ರಮವು ವರ್ಣರಂಜಿತ ದೀಪಗಳನ್ನು ಬಳಸಿ ರಾತ್ರಿಯ ಐತಿಹಾಸಿಕ ಸ್ಮಾರಕಗಳನ್ನು ಪ್ರದರ್ಶಿಸುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಸ್ಮಾರಕಗಳ ಮಹತ್ವವನ್ನು ವಿವರಿಸುವ ಸಣ್ಣ ನಿರೂಪಣೆಯಿರುತ್ತದೆ.

ರಾತ್ರಿ ಬೆಳಕಿನಲ್ಲಿ ಬಸವಣ್ಣ, ವಿಜಯ ವಿಠಲ ದೇವಸ್ಥಾನ, ಮಾತಂಗ ಬೆಟ್ಟ ಸೇರಿದಂತೆ ಪ್ರಮುಖ ಸ್ಮಾರಕಗಳನ್ನು ನೋಡಬಹುದು . ಹಂಪಿಯಲ್ಲಿನ ದೀಪಾಲಂಕಾರವು ಪ್ರವಾಸಿಗರಿಗೆ ಅದ್ಭುತವಾದ ಅನುಭವವನ್ನು ನೀಡುತ್ತದೆ. ಮಾರ್ಚ 3 ನೇ ವಾರದಿಂದ ಹಂಪಿ ಬೈ ನೈಟ್  ಮರುಪ್ರಾರಂಭವಾಗುವ ಸಾಧ್ಯತೆಗಳಿವೆ.

ಉಕ್ರೇನ್ ನಲ್ಲಿ ಚಿಕ್ಕೋಡಿಯ 7 ವಿದ್ಯಾರ್ಥಿಗಳ ಪರದಾಟ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button