ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಫೆ.27 ರಂದು ನಡೆಯಲಿರುವ ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಕೈಚೀಲಗಳು(ಬ್ಯಾಗ್), ನೀರಿನ ಬಾಟಲ್ ಹಾಗೂ ಯಾವುದೇ ತರಹದ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಕಾರ್ಯಕ್ರಮದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಬಸ್ ಮತ್ತಿತರ ವಾಹನಗಳಲ್ಲಿ ಆಗಮಿಸುವ ಫಲಾನುಭವಿಗಳು ಹಾಗೂ ಸಾರ್ವಜನಿಕರು ತಮ್ಮ ಬ್ಯಾಗ್ ಗಳು, ನೀರಿನ ಬಾಟಲ್ ಮತ್ತು ಮೊಬೈಲ್ ಹೊರತುಪಡಿಸಿ ಯಾವುದೇ ತರಹದ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಬಸ್ ಅಥವಾ ತಮ್ಮ ವಾಹನಗಳಲ್ಲಿಯೇ ಇಟ್ಟು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಬಹುದು.
ಮೊಬೈಲ್ ಫೋನ್ ಗಳನ್ನು ತರಲು ಅವಕಾಶವಿರುತ್ತದೆ. ಭದ್ರತೆ ದೃಷ್ಟಿಯಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
*ಲಿಫ್ಟ್ ಗಾಗಿ ತೆಗೆದಿದ್ದ ಹೊಂಡಕ್ಕೆ ಬಿದ್ದ ಮಗು; ದಾರುಣ ಸಾವು*
https://pragati.taskdun.com/6-yers-girldeathlift-pitbangalore/
*ಎಲ್ಲ ಮುಖ್ಯಮಂತ್ರಿಗಳ ಆಡಳಿತ ಅನಾವರಣಗೊಳಿಸುವ ಮ್ಯೂಸಿಯಂ ಸ್ಥಾಪನೆ; ಸಿಎಂ ಬೊಮ್ಮಾಯಿ*
https://pragati.taskdun.com/karnatakas-first-chief-minister-k-c-reddystatuevidhanasoudha/
ಮುಖ್ಯಮಂತ್ರಿ ಭದ್ರತಾ ಪೊಲೀಸ್ ಅಧಿಕಾರಿ ಆಕಸ್ಮಿಕ ಗುಂಡಿಗೆ ಬಲಿ
https://pragati.taskdun.com/up-chief-ministers-security-police-officer-killed-in-accidental-firing/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ