Latest

45 ಹ್ಯಾಂಡ್ ಗನ್ ಗಳೊಂದಿಗೆ ಸಿಕ್ಕಿಬಿದ್ದ ದಂಪತಿ

ಪ್ರಗತಿವಾಹಿನಿ ಸುದ್ದಿ,ದೆಹಲಿ: ಬರೊಬ್ಬರಿ 45 ಹ್ಯಾಂಡ್ ಗನ್ ಗಳನ್ನು  ಕಳ್ಳಸಾಗಾಟ ಮಾಡುತ್ತಿದ್ದ ದಂಪತಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  ಕಸ್ಟಂ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹರ್ಯಾಣಾದ ಗುರುಗ್ರಾಮ ನಿವಾಸಿಗಳಾದ  ಜಗಜಿತ್ ಸಿಂಗ್ ಹಾಗೂ ಜಸ್ವಿಂದರ್ ಕೌರ್ ದಂಪತಿಯಿಂದ ವಶಕ್ಕೆ ಪಡೆದ ಹ್ಯಾಂಡ್ ಗನ್ ಗಳ ಒಟ್ಟು ಮೌಲ್ಯ 22 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ದಂಪತಿ ಜು.10ರಂದು  ವಿಯೆಟ್ನಾಂನಿಂದ ಭಾರತಕ್ಕೆ ಬಂದಿಳಿದ ನಂತರ ಇವರ ಮೇಲೆ ನಿಗಾ ಇರಿಸಲಾಗಿತ್ತು.

ಈ ಹಿಂದೆ ತಾವು 12 ಲಕ್ಷಕ್ಕೂ ಹೆಚ್ಚು ಮೌಲ್ಯದ 25 ಗನ್ ಗಳನ್ನು ಅಕ್ರಮವಾಗಿ ಕಳ್ಳಸಾಗಾಟ ಮಾಡಿದ್ದಾಗಿ ದಂಪತಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎಂದು ಕಸ್ಟಂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಎಲ್ಲ ಗನ್ ಗಳು ಅಸಲಿಯಾಗಿವೆ ಎಂದು  ರಾಷ್ಟ್ರೀಯ ಸುರಕ್ಷತಾ ಸಿಬ್ಬಂದಿ ದೃಢಪಡಿಸಿದ್ದಾರೆ.

Home add -Advt

ಮೊದಲ ಸುತ್ತಿನಲ್ಲಿ ರಿಷಿ ಸುನಕ್ ಭಾರಿ ಮುನ್ನಡೆ

 

Related Articles

Back to top button