ಪ್ರಗತಿವಾಹಿನಿ ಸುದ್ದಿ; ಪಾಲಬಾವಿ: ಹಂದಿಗುಂದ ಗ್ರಾಮದಲ್ಲಿ ಸನ್ 2022 – 23ನೇ ಸಾಲಿನ ವಾರ್ಡ್ ನಂಬರ್ ಐದರ ಕಲ್ಲಪ್ಪ ಮಾರುತಿ ದಡ್ಡಿಮನಿ ನಿಧನರಾದ ಕಾರಣ ತೆರುವಾದ ಸ್ಥಾನಕ್ಕೆ ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ಉಪಚುನಾವಣೆ ಉಪಚುನಾವಣೆ ಘೋಷಣೆಯಾಗಿದ್ದು ಕಳೆದ ದಿನಾಂಕ 13 ರಿಂದ ಆರಂಭಗೊಂಡಿರುವ ನಾಮಪತ್ರಿಕೆ ಸಲ್ಲಿಕೆಯು ಇವತ್ತು ದಿನಾಂಕ 18ರಂದು 3 ಗಂಟೆಗೆ ಕೊನೆಯಯಾಗಿದ್ದು ಶನಿವಾರ ಹಾಗೂ ಸೋಮವಾರ ಮತ್ತು ಇವತ್ತು ಮಂಗಳವಾರ ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾಗಿದೆ.
ನಾಳೆ ದಿನಾಂಕ 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಕೂದ ಕೊನೆ ದಿನವಾಗಿದೆ. ಅವಶ್ಯವಿದ್ದರೆ ದಿನಾಂಕ 30ರಂದು ಮತದಾನ ನಡೆಯಲಿದ್ದು, ದಿನಾಂಕ 31ರಂದು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿಯೇ ಪಲಿತಾಂಶ ನಡೆಯಲಿದೆ ಎಂದು ಚುನಾವಣೆ ಅಧಿಕಾರಿ ಪ್ರಶಾಂತ ಸಾನಿ ಸುದ್ದಿಗಾರರಿಗೆ ತಿಳಿಸಿದರು.
ಹಂದಿಗುಂದ ಗ್ರಾಮದ 5ನೇ ವಾರ್ಡ್ ನ ಗ್ರಾಮ ಪಂಚಾಯತ ಸದಸ್ಯ ಕಲ್ಲಪ್ಪ ದಡ್ಡಿಮನಿ ನಿಧನದಿಂದ ತೆರವಾದ ಸ್ಥಾನಕ್ಕೆ ಕಳೆದ ಶನಿವಾರ ಗ್ರಾ.ಪಂ ಮಾಜಿ ಸದಸ್ಯ ಶಿವಲಿಂಗಯ್ಯ(ಕುಮಾರ) ಜಗದೀಶ ಹಿರೇಮಠ ಇವರ ಮೊದಲ ನಾಮಪತ್ರ ಸಲ್ಲಿಕೆಯಾದರೆ, ಸೋಮವಾರ ಹನುಮಂತ ದಡ್ಡಿಮನಿ ಹಾಗೂ ಶಿವುಪುತ್ರ ದಡ್ಡಿಮನಿ, ಇಬ್ಬರು ನಾಮಪತ್ರಗಳನ್ನು ಸಲ್ಲಿಕೆ ಮಾಡಿದ್ದಾರೆ. ಇಂದು ಮಂಗಳವಾರ ದಿನಾಂಕ 18ರಂದು ನಾಮಪತ್ರ ಸಲ್ಲಿಸುವ ಕೊನೆ ದಿನವಾಗಿದ್ದರಿಂದ ಅಪಾರ ಪ್ರಮಾಣದ ಅಭಿಮಾನಿಗಳೊಂದಿಗೆ ಶ್ರೀಮಂತ ಪೂಜೇರಿ, ಸಂಗಪ್ಪ ಮಿರ್ಜಿ, ನಾಗಪ್ಪ ಮೇಟಿ, ಸಿದ್ದರಾಮ ಉಳಾಗಡ್ಡಿ, ಗೌಡಪ್ಪ ಪಾಟೀಲ ಈ ಐದು ಜನರು ತಮ್ಮ ತಮ್ನ ಅಭಿಮಾನಿ ಕಾರ್ಯಕರ್ತರೊಂದಿಗೆ ತಮ್ಮ ಉಮೇದವಾರಿಕೆಯನ್ನು ಸಲ್ಲಿಸಿದರು. ಒಟ್ಟು ಎಂಟು ನಾಮಪತ್ರಗಳು ಸಲ್ಲಿಕೆಯಾಗಲಿವೆ ಎಂದು ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಯಾಗಿ ಎಂ.ಪಿ.ನೇಮಗೌಡ, ಅಭಿವೃದ್ಧಿ ಅಧಿಕಾರಿ ಮಹಾದೇವ ಕುಂಬಾರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿರುಕು ಬಿಟ್ಟ ಬಿಜೆಪಿ ಪಕ್ಷ, ಕೆ.ಕೆ ಹಾಕಿದ ಕಾಂಗ್ರೆಸ್ ಪಕ್ಷ:
ಹಂದಿಗುಂದ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮ ಪಂ ಉಪಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆ ಬಿರುಕು ಬಿಟ್ಟಂತಾಗಿದೆ. ವಾರ್ಡ್ ನಂಬರ್ 5 ರಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯ ಪಕ್ಷದ ಘಟಾನುಘಟಿಗಳು ಚುನಾವಣೆ ಕಣದ ಕಣಕ್ಕಿಳಿದಿದ್ದು ಬಿಜೆಪಿ ಪಕ್ಷದಲ್ಲಿ ಭಾರಿ ಬಿರುಕು ಮೂಡಿದೆ.
ಬಿಜೆಪಿ ಒಡೆದ ಮನೆಯ ಲಾಭವನ್ನು ಪಡೆಯಲು ಕಾಂಗ್ರೆಸ್ ಪಕ್ಷವುದು ನಿಶ್ಚಿತವಾಗಿದೆ. ಕಾಂಗ್ರೆಸ್ ಪಕ್ಷವು ಬಿಜೆಪಿ ಪಕ್ಷದ ಒಳ ಜಗಳದ ಲಾಭವನ್ನು ಪಡೆಯುವುದೆಂದು ಮತದಾರ ಪ್ರಭುಗಳು ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿವೆ
ಉಮೇದುವಾರಿಕೆಯ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಶೈಲ ಪಾಟೀಲ, ಶಂಕರಗೌಡ ಪಾಟೀಲ, ಶ್ರೀಶೈಲ ಗೋಲಬಾವಿ, ಮುದುಕಪ್ಪ ಸುಳಣ್ಣವರ, ಮುರಗೆಪ್ಪ ಅಂದಾನಿ, ವಿಶ್ವನಾಥ ಖಾನಗೌಡ, ಶಿವಪ್ಪ ಮಿರ್ಜಿ, ರಮೇಶ್ ಉಳ್ಳಾಗಡ್ಡಿ, ರುದ್ರಪ್ಪ ಬದ್ರಶೆಟ್ಟಿ, ಶಿವಲಿಂಗ ಬಾಗೇವಾಡಿ, ಶಿವಲಿಂಗ ಕೌಜಲಗಿ, ಮಹಾದೇವ ಯರಗಣಿ, ಬಸವರಾಜ ಮಿರ್ಜಿ, ಮಹಾಲಿಂಗ ಬಾಗೇವಾಡಿ, ಶ್ರೀಶೈಲ ಬಡಿಗೇರ, ಶೇಖರಗೌಡ ಪಾಟೀಲ, ಚೇತನ ಬಿಜ್ಜರಗಿ, ಶಿವಪ್ಪ ಹೊಸೂರ, ಹಾಲಪ್ಪ ತಿಪ್ಪನ್ನವರ, ಮುತ್ತಪ್ಪ ತಳವಾರ, ಗೋಪಾಲ ಯರಗಾಣಿ, ಸಿದ್ದರಾಯ ಪೂಜಾರಿ, ಹನುಮಂತ ಘಂಟಿ, ಮಹಾನಿಂಗ ಕಾಳೆ, ಲಕ್ಷ್ಮಣ ಕರಿಗಾರ, ಕೃಷ್ಣಪ್ಪ ಬೋರನಟ್ಟಿ, ಬಸವರಾಜ ತೆರದಾಳ, ಗೊಳಪ್ಪ ಖಾನಗೌಡ, ಸದಾಶಿವ ಬಾಗೇವಾಡಿ, ಸುರೇಶ ಕೋಟಗಿ, ಬಸವರಾಜ ಉಳ್ಳಾಗಡ್ಡಿ, ಶಂಕರ ಸರಪಣಿ, ದುಂಡಪ್ಪ ಉಳ್ಳಾಗಡ್ಡಿ ಇತರರು ಇದ್ದರು.
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ; ಹನುಮಂತನ ಬಾಲದಂತೆ ಬೆಳೆಯುತ್ತಿದೆ ಆರೋಪಿಗಳ ಸಂಖ್ಯೆ
https://pragati.taskdun.com/latest/kptcl-exam-scam-another-accusedarrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ