*ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು*

ಪ್ರಗತಿವಾಹಿನಿ ಸುದ್ದಿ: ಹಂಗರಗಾ ಗ್ರಾಮದ ರಾಜು ಭರ್ಮಾ ಪಾಟೀಲ ಅವರ ಮನೆಗೆ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ, ಇಡೀ ಮನೆ ಹಾಗೂ ಮನೆಯಲ್ಲಿದ್ದ ಸಾಮಗ್ರಿಗಳು ಸುಟ್ಟು ಭಸ್ಮವಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ತಿಕ ನೆರವು ನೀಡಲಾಯಿತು.
ಮಗಳ ಮದುವೆಗೆಂದು ಮನೆಯಲ್ಲಿ ಧವಸ- ಧಾನ್ಯ, ಹಣ ಸೇರಿದಂತೆ ಸಾಕಷ್ಟು ವಸ್ತುಗಳನ್ನು ಕೂಡಿಡಲಾಗಿತ್ತು. ಆ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿರುವುದು ಆ ಕುಟುಂಬವನ್ನು ಬೀದಿಗೆ ತಳ್ಳಿದೆ.
ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಆಪ್ತ ಕಚೇರಿ ಸಿಬ್ಬಂದಿ ಹಾಗೂ ಸ್ಥಳೀಯ ಮುಖಂಡರನ್ನು ಕಳಿಸಿ ಲಕ್ಷ್ಮೀತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಿದರು.
ರಾಜು ಪಾಟೀಲ ಅವರ ಕುಟುಂಬಕ್ಕೆ ಈ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ, ಅವರು ಯಾವುದೇ ಕಾರಣದಿಂದ ಧೃತಿಗೆಡಬಾರದು ಎಂದು ಸಚಿವರು ಪ್ರಾರ್ಥಿಸಿದ್ದಾರೆ.
Financial Assistance by Laxmi Tai Foundation
Belagavi: A tragic incident occurred in Hungarga village where the house of Raju Bharma Patil was completely destroyed due to a sudden fire caused by a short circuit. In response to this unfortunate event, financial assistance was provided by the Laxmi Tai Foundation.
The family had stored food grains, cash, and several essential items in preparation for their daughter’s wedding. Unfortunately, all these belongings were reduced to ashes in the fire, leaving the family in a dire situation.
Taking note of the incident, Women and Child Development Minister Laxmi Hebbalkar sent her close office staff and local leaders to extend financial support through the Laxmi Tai Foundation.
The Minister has prayed that God gives strength to Raju Patil’s family to endure this hardship and urged them not to lose hope under any circumstances.



