
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವಿಶ್ವ ಹಿಂದೂ ಪರಿಷತ್, ಭಜರಂಗ ದಳದತಹ ರಾಷ್ಟ್ರೀಯ ಸಂಘಟನೆಗಳಿಂದ ಮಾತ್ರ ಮಠ ಮಂದಿರಗಳ ರಕ್ಷಣೆಗೆ ಸಾಧ್ಯ ಎಂದು ನೀಲಜಿ ಧ್ಯಾನ ಕೇಂದ್ರದ ಶೃದ್ಧಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹಿಂದೂಗಳು ಒಗ್ಗಟ್ಟಿನಿಂದ ಮುನ್ನುಗ್ಗಿದರೆ ರಾಮಮಂದಿರದಂತಹ ನೂರು ವಿಜಯ ಸಾಧಿಸಲು ಸಾಧ್ಯವಿದೆ ಎಂದೂ ಅವರು ಹೇಳಿದರು.
ರುದ್ರಕೇಸರಿ ಸ್ವಾಮಿಗಳು ಮಾತನಾಡಿ, ಸಾಧು ಸಂತರು ವಿಶ್ವಹಿದೂಪರಿಷತ್ ನ ಭಾಗವಾಗಿ ಕೆಲಸ ಮಾಡಿದರೆ ಹಿಂದೂ ಸಮಾಜ ಸಂಘಟಿತವಾಗಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಭಾವುಕಣ್ಣಾ ಲೋಹಾರ್ ಮಾತನಾಡಿ, ಸದೃಢ ಸಮಾಜದ ನಿರ್ಮಾಣ ನಮ್ಮ ಗುರಿ. ಯುವಕರು ಕೆಟ್ಟ ಚಟಗಳಿಂದ ದೂರವಿರಬೇಕು ಎಂದರು.

ಪ್ರಾಸ್ತಾವಿಕವಾಗಿ ಕೃಷ್ಣ ಭಟ್ ಮಾತನಾಡಿ, ಹಿತಚಿಂತಕ ಮತ್ತು ಹನುಮಮಾಲೆಯ ಬಗ್ಗೆ ಮಾಹಿತಿ ನೀಡಿದರು.
ಹೇಮಂತ ಹಾವಳ ವಂದಿಸಿದರು. ಗಜಾನನ ಬೀರ್ಜೆ ಜಯ ಘೋಷಣೆ ಹೇಳಿದರು.
ವೇದಿಕೆಯ ಮೇಲೆ ವಿಜಯ ಜಾಧವ, ಆನಂದ ಕರಲಿಂಗಣ್ಣವರ, ಬಸವರಾಜ ಹಳಿಂಗಲಿ, ಆದಿನಾಥ ಗಾವಡೆ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ