Belagavi NewsBelgaum News
*ಹನುಮಾನ್ ಮಂದಿರದ ಜೀರ್ಣೋದ್ಧಾರ ಕಾಮಗಾರಿಗೆ 10 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೊಕನೂರ್ ಗ್ರಾಮದ ಶ್ರೀ ಹನುಮಾನ್ ಮಂದಿರದ ಜೀರ್ಣೋದ್ಧಾರ ಕಾಮಗಾರಿಗೆ 10 ಲಕ್ಷ ರೂ,ಗಳ ಚೆಕ್ ನ್ನು ದೇವಸ್ಥಾನದ ಟ್ರಸ್ಟ್ ಕಮೀಟಿಯವರಿಗೆ ಭಾನುವಾರ ಹಸ್ತಾಂತರಿಸಿದರು.

ಇದಾದ ನಂತರ, ಲಕ್ಷ್ಮೀ ಹೆಬ್ಬಾಳಕರ್ ಅವರು ಬೆಳಗಾವಿಯ ಗೃಹ ಕಚೇರಿಯಲ್ಲಿ ವಿವಿಧ ಸ್ಥಳಗಳಿಂದ ಆಗಮಿಸಿದ್ದ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಸೂಚಿಸಿದರು.