Latest

ಭೀಕರ ಅಪಘಾತ; ಸ್ಥಳದಲ್ಲೇ ಮೃತಪಟ್ಟ ಅವಳಿ ಕಂದಮ್ಮಗಳು; ಗಾಯಗೊಂಡಿದ್ದ ತಾಯಿಯೂ ಕೊನೆಯುಸಿರು

ಪ್ರಗತಿವಾಹಿನಿ ಸುದ್ದಿ; ಹಾಸನ: ಹಾಸನದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಹಾಗೂ ಮೂರು ವರ್ಷದ ಅವಳಿ ಮಕ್ಕಳು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಹಾಸನದ ಗವೇನಹಳ್ಳಿ ನಿವಾಸಿ ಜ್ಯೋತಿ ಹಾಗೂ ಆಕೆಯ ಇಬ್ಬರು ಅವಳಿ ಮಕ್ಕಳಾದ 3 ವರ್ಷದ ಪ್ರಣವ್ ಹಾಗೂ ಪ್ರಣತಿ ಮೃತರು. ಶಿವಾನಂದ-ಜ್ಯೋತಿ ದಂಪತಿ ತಮ್ಮ ಇಬ್ಬರು ಅವಳಿ ಮಕ್ಕಳೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿಗೆ ಸಿಲುಕಿದ್ದ ಮಕ್ಕಳ ಮೃತದೇಹ ಸುಮಾರು ಮೂರು ಕಿ.ಮೀ ಎಳೆದೊಯ್ಯಲ್ಪಟ್ಟಿದೆ.

Home add -Advt

ಗಂಭೀರವಾಗಿ ಗಾಯಗೊಂಡಿದ್ದ ಜ್ಯೋತಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ನಟಿ ಐಶ್ವರ್ಯಾ ರೈಗೆ ಸಂಕಷ್ಟ: ಇಡಿ ಸಮನ್ಸ್ ಜಾರಿ

Related Articles

Back to top button