Latest

ನಟಿ ಐಶ್ವರ್ಯಾ ರೈಗೆ ಸಂಕಷ್ಟ: ಇಡಿ ಸಮನ್ಸ್ ಜಾರಿ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈಗೆ ಇಡಿ ಸಂಕಷ್ಟ ಎದುರಾಗಿದೆ. ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ನೋಟೀಸ್ ನೀಡಿದೆ.

2016ರಲ್ಲಿ ಪನಾಮ ಮೂಲದ ಕಾನೂನು ಸಂಸ್ಥೆಯೊಂದರ 11.5 ಕೋಟಿ ತೆರಿಗೆ ದಾಖಲೆಗಳು ಯುಕೆಯಲ್ಲಿ ಸೋರಿಕೆಯಾಗಿದ್ದವು. ಇದರಲ್ಲಿ ವಿಶ್ವದ ಹಲವು ರಾಜಕೀಯ ನಾಯಕರು, ನಟರು, ಕ್ರೀಡಾಪಟುಗಳು, ಉದ್ಯಮಿಗಳ ಹೆಸರು ಬಹಿರಂಗವಾಗಿತ್ತು. ತೆರಿಗೆ ವಂಚನೆ ನಡೆಸಿರುವ ಆರೋಪ ಕೇಳಿಬಂದಿತ್ತು.

Home add -Advt

ಇದೇ ಪ್ರಕರಣದ ಭಾಗವಾಗಿ ಇದೀಗ ಐಶ್ವರ್ಯಾ ರೈ ಅವರಿಗೂ ಇಡಿ ನೋಟೀಸ್ ನೀಡಿದ್ದು, ಇಂದು ಲೋಕನಾಯಕ್ ಭವದಲ್ಲಿ ಇಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಈ ಹಿಂದೆ ಅಭಿಷೇಕ್ ಬಚ್ಚನ್ ಕೂಡ ಇಡಿ ವಿಚಾರಣೆ ಎದುರಿಸಿದ್ದರು.
ಕರ್ನಾಟಕವನ್ನೆ ಬಂದ್ ಮಾಡಿ ಹೋರಾಟ ನಡೆಸುತ್ತೇವೆ; ಪ್ರವೀಣ್ ಶೆಟ್ಟಿ ಎಚ್ಚರಿಕೆ…!

Related Articles

Back to top button