ಬೆಳಗಾವಿಯಲ್ಲಿ ಕುಂದಾ ತಿಂದು ಡಾನ್ಸ್ ಮಾಡಿದ ಹ್ಯಾಟ್ರಿಕ್ ಹೀರೋ; ಶಿವಣ್ಣನ ‘ವೇದ’ಕ್ಕೆ ಕುಂದಾನಗರಿಯ ಅಭಿಮಾನಿಗಳ ಪ್ರೇಮದ ನಾದ
ವಿಡೀಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ – https://fb.watch/hTBuXiAABc/?mibextid=RUbZ1f
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ‘ವೇದ’ ಚಿತ್ರದ ಪ್ರೊಮೊಗಾಗಿ ಕುಂದಾನಗರಿ ಬೆಳಗಾವಿಗೆ ಶುಕ್ರವಾರ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಬೆಳಗಾವಿಗರು ಅದ್ಧೂರಿಯಾಗಿ ಬರಮಾಡಿಕೊಳ್ಳುವ ಮೂಲಕ ಪ್ರೇಮದ ನಾದ ಮೊಳಗಿದ್ದಾರೆ.
ಬೆಳಗಾವಿಗೆ ಆಗಮಿಸುತ್ತಿದ್ದಂತೆ ಇಲ್ಲಿನ ಶಿವಬಸವನಗರ ಸಂಬಂಧಿಯೊಬ್ಬರ ಮನೆಯಲ್ಲಿ ಕುಂದಾ ರುಚಿ ಸವಿದ ಶಿವಣ್ಣ ಹಾಗೂ ಪತ್ನಿ ಗೀತಾ ಲಘು ಉಪಾಹಾರದ ನಂತರ ಚನ್ನಮ್ಮ ವೃತ್ತಕ್ಕೆ ಆಗಮಿಸಿ ರಾಣಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆಗೈದು ಗೌರವಿಸಿದರು. ಈ ವೇಳೆ ಚನ್ನಮ್ಮ ಸರ್ಕಲ್ ಕಿಕ್ಕಿರಿದ ಅಭಿಮಾನಿಗಳ ಢೋಲು, ತಾಳ, ಶಿಳ್ಳೆ, ಚಪ್ಪಾಳೆ, ಜಯಘೋಷದ ಮಧ್ಯೆ ವೇದೋತ್ಸವದ ಅಂಗಣವಾಯಿತು. ಶಿವಣ್ಣ ಕೂಡ ಅಭಿಮಾನಿಗಳತ್ತ ಕೈಬೀಸಿ ಪ್ರೀತಿ ತೋರ್ಪಡಿಸಿದರು.
ಅಲ್ಲಿಂದ ಬೆಳ್ಳಿ ಬಣ್ಣದ ರಥದಲ್ಲಿ ಕುಳಿತು ಅಭಿಮಾನಿಗಳೊಂದಿಗೆ ರೋಡ್ ಶೋ ಮೂಲಕ ಚಿತ್ರಾ ಟಾಕೀಸ್ ಗೆ ಆಗಮಿಸಿದರು. ಅಲ್ಲಿನ ವೇದಿಕೆಯಲ್ಲಿ ಬೆಳಗಾವಿಗರನ್ನುದ್ದೇಶಿಸಿ ಮಾತನಾಡಿದ ಅವರು ಇಲ್ಲಿನವರು ಕನ್ನಡ ನಾಡು, ನುಡಿ ಜತೆ ತಮಗೆ ನೀಡಿದ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಚಿರಋಣಿಯಾಗಿರುವುದಾಗಿ ತಿಳಿಸಿದರು.
ಇದೇ ವೇಳೆ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ಹುರಿದುಂಬಿಸಿದ ಶಿವಣ್ಣ “ಪುಷ್ಪಾ..ಪುಷ್ಪಾ..” ಎಂಬ ಹಾಡು ಹಾಡುತ್ತಿದ್ದಂತೆ ಅಭಿಮಾನಿಗಳ ಚಪ್ಪಾಳೆ, ಶಿಳ್ಳೆಗಳು ತಾರಕ ತಲುಪಿದ್ದವು. ಅವರ ಪತ್ನಿ ಗೀತಾ ಕೂಡ ಶಿವಣ್ಣ ಜತೆ ಅಭಿಮಾನಿಗಳ ಪ್ರೀತಿ, ಪ್ರೋತ್ಸಾಹದ ಸಂತಸ ಪಡೆದರು.
ಅವರ ಹೊಸ ಚಿತ್ರ ‘ವೇದ’ದಲ್ಲಿ ಬೆಳಗಾವಿ ಭಾಗದ ಜಾನಪದ ಸೊಗಡಿನ ಹಾಡು ಅಳವಡಿಸಿರುವುದಕ್ಕೆ ಬೆಳಗಾವಿಗರು ವಿಶೇಷವಾಗಿ ಶಿವಣ್ಣ ಹಾಗೂ ಟೀಂಗೆ ಅಭಿನಂದಿಸಿದರು. ‘ವೇದ’ ವೀಕ್ಷಿಸಿ ಯಶಸ್ವಿಯಾಗಿಸುವಂತೆ ಶಿವಣ್ಣ ಅಭಿಮಾನಿಗಳಿಗೆ ಕೋರಿದರು.
ಇದೇ ವೇಳೆ ಶಿವಣ್ಣ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಎಲ್ಲರನ್ನೂ ಆತ್ಮೀಯವಾಗಿ ಕಂಡ ಶಿವಣ್ಣ ಸೆಲ್ಫಿ ಆಸಕ್ತರಿಗೆ ನಿರಾಸೆಯಾಗದಂತೆ ನಡೆದುಕೊಂಡರು.
ಇದಕ್ಕೂ ಮುನ್ನ ಹಿರೇಬಾಗೇವಾಡಿಯ ಟೋಲ್ ನಾಕಾ ಬಳಿಯೂ ಶಿವಣ್ಣ ದಂಪತಿಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಟಿಆರ್ಎಫ್ ‘ಉಗ್ರ ಸಂಘಟನೆ’ ಎಂದು ಘೋಷಿಸಿದ ಕೇಂದ್ರ ಸರ್ಕಾರ
https://pragati.taskdun.com/the-central-government-has-declared-the-trf-a-terrorist-organisation/
*ವಿಧಾನಸೌಧದಲ್ಲಿ ಹಣ ಪತ್ತೆ ಕೇಸ್; PWD ಎಇ ಪರ ವಕೀಲರ ಸ್ಪಷ್ಟನೆ*
https://pragati.taskdun.com/vidhanasoudha10-5lakh-found-casepwd-ae-jagadishadvocate-rajuclarification/
*ಸಾಹಿತ್ಯ ಲೋಕಕ್ಕೆ ಉತ್ಕೃಷ್ಟ ಮುನ್ನುಡಿ ಬರೆಯಲಿದೆ ಸಿಎಂ ಬೊಮ್ಮಾಯಿ*
https://pragati.taskdun.com/akhila-bharata-kannada-sahitya-sammelanacm-basavaraj-bommaihaveri/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ