Kannada NewsKarnataka NewsLatest
*ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ: ಕಾಮುಕ ಶಿಕ್ಷಕನನ್ನು ಹಿಡಿದು ಥಳಿಸಿದ ಪೋಷಕರು*

ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನನ್ನು ಹಿಡಿದು ಪೋಷಕರು ಥಳಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಸವಣೂರಿನ ಸರ್ಕಾರಿ ಉರ್ದು ಶಾಲೆ ಉನ್ನತೀಕರಿಸಿದ ಶಾಲಾ ಶಿಕ್ಷಕ ಜಗದೀಶ್ ಎಂಬಾತ ವಿದ್ಯಾರ್ಥಿನಿತರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಶಿಕ್ಷಕನ ಕಾಟಕ್ಕೆ ಬೇಸತ್ತ ವಿದ್ಯಾರ್ಥಿನಿಯರು ಪೋಷಕರಿಗೆ ದೂರು ನೀಡಿದ್ದಾರೆ.
ವಿಷಯ ತಿಳಿಯುತ್ತಿದಂತೆ ಶಾಲೆಗೆ ಧಾವಿಸಿದ ಪೋಷಕರು ಶಿಕ್ಷಕನಿಗೆ ಚಪ್ಪಲಿ ಹಾರಹಾಕಿ, ಮನ ಬಂದಂತೆ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.



