Uncategorized

*ಹಾವೇರಿ ಜಿಲ್ಲಾಸ್ಪತ್ರೆ ಬಳಿಕ ತಹಶೀಲ್ದಾರ್ ಕಚೇರಿ ಸರದಿ; ಮಳೆಯಿಂದ ಸೋರುತ್ತಿದೆ ಸರ್ವೆ ಇಲಾಖೆ ಕೊಠಡಿ; ಟಾರ್ಪಲ್ ಕಟ್ಟಿದ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ; ಹಾವೇರಿ: ನಿರಂತರ ಮಳೆಯಿಂದಾಗಿ ಹಾವೇರಿ ಜಿಲ್ಲಾಸ್ಪತ್ರೆ ಬಳಿಕ ಇದೀಗ ತಹಶೀಲ್ದಾರ್ ಕಚೇರಿಯೂ ಸೋರುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಹಾವೇರಿ ಜಿಲ್ಲಾಸ್ಪತ್ರೆ ಸೋರುತ್ತಿದ್ದು, ಅಲ್ಲಿನ ಅವ್ಯವಸ್ಥೆ ಯನ್ನು ನಿನ್ನೆ ಕಣ್ಣಾರೆ ಕಂಡಿದ್ದ ಸಿಎಂ ಸಿದ್ದರಾಮಯ್ಯ, ಆರೋಗ್ಯ ಇಲಾಖೆಯ ಎಇಇ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಇದೀಗ ಮಳೆ ಅಬ್ಬರಕ್ಕೆ ಹಾವೇರಿ ತಹಶೀಲ್ದಾರ್ ಕಚೇರಿಯೂ ಸೋರುತ್ತಿದ್ದು, ಸಿಬ್ಬಂದಿಗಳು ಟಾರ್ಪಲ್ ಕಟ್ಟಿ ದಾಖಲೆ ರಕ್ಷಿಸುತ್ತಿದ್ದಾರೆ.

ತಹಶೀಲ್ದಾರ್ ಕಚೇರಿಯ ಸರ್ವೆ ಇಲಾಖೆ ಕೊಠಡಿಯಲ್ಲಿ ಸೋರುತ್ತಿದ್ದು, ಮಳೆ ನೀರು ಬೀಳುತಿದೆ. ಸಿಬ್ಬಂದಿಗಳು ಒಂದೆಡೆ ಟಾರ್ಪೊಲ್ ಕಟ್ಟಿದ್ದರೆ ಮತ್ತೊಂದೆಡೆ ಬಕೆಟ್ ಗಳನ್ನು ಇಟ್ಟು ಬಕೆಟ್ ತುಂಬಿ ನೀರು ಹೊರಹಾಕುತ್ತಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುಇರುವ ಜಿಲ್ಲಾಧಿಕಾರಿ ಸಧ್ಯಕ್ಕೆ ಕಚೇರಿ ಮೇಲೆ ತಗಡಿನ ಶೀಟ್ ಹಾಸುವಂತೆ ಸೂಚಿಸಿದ್ದಾರೆ.


Related Articles

Back to top button